ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್‌ರಿಂದ ಉಪವಾಸ ಸತ್ಯಾಗ್ರಹ ಆರಂಭ

ಕಾಸರಗೋಡು: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ಕೊನೆಗೊಳಿಸಬೇಕು, ಸಮಾನ ನಾಗರಿಕ ಸಂಹಿತೆ ಜ್ಯಾರಿಗೊಳಿಸುವ ನಿರ್ಧಾರದಿಂದ ಕೇಂದ್ರ ಸರಕಾರ ಹಿಂಜರಿಯಬೇಕು ಮುಂತಾದ ಬೇಡಿಕೆಗಳನ್ನು ಮುಂದಿರಿಸಿ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ನೇತೃತ್ವದಲ್ಲಿ ೨೪ ಗಂಟೆಗಳ ಕಾಲ ನಡೆಯುವ ಉಪವಾಸ ಸತ್ಯಾಗ್ರಹ ಇಂದು ಬೆಳಿಗ್ಗೆ ಊರಂಭಗೊಂಡಿತು. ವಿದ್ಯಾನಗರ ಡಿಸಿಸಿ ಕಚೇರಿ ಪರಿಸರದಲ್ಲಿ ನಡೆಯುವ ಸತ್ಯಾಗ್ರಹವನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಉದ್ಘಾಟಿಸಿದರು. ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ಅಧ್ಯಕ್ಷತೆ ವಹಿಸಿದರು. ಮಹಾರಾಷ್ಟ್ರ ಪ್ರದೇಶ್ ಕಾಂಗ್ರೆಸ್ ಉಪಾಧ್ಯಕ್ಷ ಮುಹಿಸಿಂ ಹೈದರ್, ಎಐಸಿಸಿ ಸೆಕ್ರೆಟರಿ ಕೆ. ಮೋಹನನ್, ನೇತಾರರಾದ ಸೋನಿ ಸೆಬಾಸ್ಟಿಯನ್, ಕರ್ನಾಟಕ ಮಾಜಿ ಸಚಿವ ಕೆ. ರಮಾನಾಥ ರೈ, ಖಾದರ್ ಮಾಂಗಾಡ್, ಪಿ.ಎ. ಅಶ್ರಫ್ ಅಲಿ, ಪಿ. ಕುಂಞಿಕಣ್ಣನ್, ಹಕೀಂ ಕುನ್ನಿಲ್, ಎ. ಗೋವಿಂದನ್, ಸಿ.ಟಿ. ಅಹಮ್ಮದಲಿ ಮೊದಲಾದವರು ಭಾಗವಹಿಸುತ್ತಿದ್ದಾರೆ.

You cannot copy contents of this page