ಸಚಿವೆ ವೀಣಾ ಜೋರ್ಜ್‌ಗೆ ಅಮೆರಿಕ ಸಂದರ್ಶನಕ್ಕೆ ಅನುಮತಿ ನಿರಾಕರಣೆ
ತಿರುವನಂತಪುರ: ಆರೋಗ್ಯ ಸಚಿವೆ ವೀಣಾ ಜೋರ್ಜ್‌ರ ಅಮೆರಿಕ ಸಂದರ್ಶನಕ್ಕೆ ಕೇಂದ್ರ ಸರಕಾರ ಅನುಮತಿ ನಿರಾಕರಿಸಿದೆ. ವಿಶ್ವದ ಪ್ರಸಿದ್ಧ ಖಾಸಗಿ ಆರೋಗ್ಯ ಸಂಶೋಧನಾ ವಿಶ್ವವಿದ್ಯಾಲಯವಾದ ಜೋನ್ಸ್ ಹೋಪಕಿನ್ಸ್ ವಿ.ವಿ.ಯಲ್ಲಿ ಇಂದು ನಡೆಯುವ ಕಾರ್ಯಕ್ರಮಕ್ಕೆ ಸಚಿವೆ ವೀಣಾ ಜೋರ್ಜ್ ಭಾಗವಹಿಸಲು ಆಮಂತ್ರಣ ಲಭಿಸಿತ್ತು. ಇದರಂತೆ ಸಚಿವೆ ನಿನ್ನೆ ಅಲ್ಲಿಗೆ ತಲುಪಬೇಕಿತ್ತು. ಆದರೆ ಸಚಿವೆಗೆ ಅಮೆರಿಕಕ್ಕೆ ತೆರಳಲು ಕೇಂದ್ರದಿಂದ ಅನುಮತಿ ಲಭಿಸಿಲ್ಲ, ಮೂರು ವಾರಗಳ ಹಿಂದೆ ಪ್ರಯಾಣಕ್ಕೆ ಅನುಮತಿ ಕೇಳಲಾಗಿತ್ತು. ಆದರೆ ಅನುಮತಿ ನಿಷೇಧಿಸಿದ ವಿಷಯ ಕೇಂದ್ರದಿಂದ ಮಂಗಳವಾರ ಸಚಿವೆಗೆ ಲಭಿಸಿದೆ ಎನ್ನಲಾಗಿದೆ. ಅನುಮತಿ ನಿರಾಕರಣೆಗೆ ಕಾರಣ ತಿಳಿಸಿಲ್ಲವೆಂದು ಸಚಿವೆಯ ಕಚೇರಿ ಮೂಲಗಳು ತಿಳಿಸಿವೆ.