ಸಮಗ್ರ ಕೇರಳ ಪಿ.ಎಸ್.ಸಿ ಗೈಡು ಬಿಡುಗಡೆ

ಕಾಸರಗೋಡು: ಲೋಕಸೇವಾ ಆಯೋಗದಲ್ಲಿ ದುಡಿದ ಅನುಭವದ ಹಿನ್ನೆಲೆಯಲ್ಲಿ ಕನ್ನಡ ಉದ್ಯೋ ಗಾರ್ಥಿ ಗಳಿಗಾಗಿ ಮಾಹಿತಿ ಕೈಪಿಡಿ ಯನ್ನು ಸಿದ್ಧಪಡಿಸಿದ ಗಣೇಶ್ ಪ್ರಸಾದ್ ಪಾಣೂರು ಅವರ ಕಾರ್ಯ ಶ್ಲಾಘನೀಯವೆಂದು ನಿವೃತ್ತ ಶಿಕ್ಷಕ ಸಿ.ಎಚ್. ನವೀನ್ ಕುಮಾರ್ ನುಡಿದರು. ಅವರು ಮಾಸ್ಟರ್ ಕೋಚಿಂಗ್ ಸೆಂಟರ್‌ನಲ್ಲಿ ನಿನ್ನೆ ನಡೆದ ಪಿಎಸ್‌ಸಿ ಸಮಗ್ರ ಮಾಹಿತಿ ಕನ್ನಡ ಕೈಪಿಡಿ ಬಿಡುಗಡೆಗೊಳಿಸಿ ಮಾತನಾ ಡಿದರು. ಕಿಶನ್ ಕುಮಾರ್ ನಾಯ್ಕ್ ಅತಿಥಿಯಾಗಿ ಭಾಗವಹಿಸಿ ದರು. ರಾಮಮೂರ್ತಿ ಸಿ.ಎಚ್, ಅನಿಲ್ ಕುಮಾರ್, ರಮೇಶ್ ಪಟ್ಟಾಜೆ, ಜಯರಾಮ ಕೆ, ಪಾಂಡು ರಂಗ ಬಿ, ಶ್ರೀನಿಧಿ ನೀರ್ಚಾಲು,  ವಿವೇಕ್ ರಾಮ್, ಅಭಿನವ್, ಮಂಜುಳಾ ಟೀಚರ್ ಮೊದಲಾ ದವರು ಭಾಗ ವಹಿಸಿದರು. ಶಿಕ್ಷಣ ಕೇಂದ್ರದ ನಿರ್ದೇ ಶಕ ಗಣೇಶ್ ಪ್ರಸಾದ್ ಪಾಣೂರು ಸ್ವಾಗತಿಸಿ, ಸಂದೇಶ್ ಎ ವಂದಿಸಿದರು.

You cannot copy contents of this page