ಸಮುದ್ರದಲ್ಲಿ ನಾಪತ್ತೆಯಾದ ಯುವಕನ ಮೃತದೇಹ ಪತ್ತೆ
ಕಾಸರಗೋಡು: ಸ್ನೇಹಿತರೊಂದಿಗೆ ಸಮುದ್ರಕ್ಕಿಳಿದ ವೇಳೆ ಅಲೆಗೆ ಸಿಲುಕಿ ನಾಪತ್ತೆಯಾದ ವಲಸೆ ಕಾರ್ಮಿಕನ ಮೃತದೇಹ ಕಣ್ಣೂರು ಬಳಿಯ ಪಳಯಂಗಾಡಿ ಮಾಟೂಲ್ ಬೀಚ್‌ನಲ್ಲಿ ನಿನ್ನೆ ಪತ್ತೆಯಾಗಿದೆ. ಉತ್ತರ ಪ್ರದೇಶದ ಬೂಲ್ ಬುಳಿಯಾವೂರ್ ಕಾನೋಜ್‌ನ ರಾಣಾ ಅಲಿಯಾಸ್ ಜೈವೀರ್ ಸಿಂಗ್ (23) ಸಾವನ್ನಪ್ಪಿದ ಯುವಕ. ಈತ ಜುಲೈ ೨೩ರಂದು ತನ್ನ ನಾಲ್ವರು ಸ್ನೇಹಿತರೊಂದಿಗೆ ಕಾಸರಗೋಡು ನೆಲ್ಲಿಕುಂಜೆ ಬೀಟ್‌ನಲ್ಲಿ ಸಮುದ್ರಕ್ಕಿಳಿದಿದ್ದನು. ಆ ವೇಳೆ ಬಂದ ಆಳೆತ್ತರದ ಅಲೆಯಲ್ಲಿ ಸಿಲುಕಿ ಆತ ನಾಪತ್ತೆಯಾಗಿದ್ದನು. ವಿಷಯ ತಿಳಿದ ಕಾಸರಗೋಡು ಕರಾವಳಿ ಪೊಲೀಸರು ಮತ್ತು ಅಗ್ನಿಶಾಮಕ ದಳ ವ್ಯಾಪಕ ಶೋಧ ಆರಂಭಿಸಿದರೂ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಈ ಮಧ್ಯೆ ನಿನ್ನೆ ಸಂಜೆ ಮಾಟೂಲ್ ಬೀಚ್‌ನಲ್ಲಿ ಆತನ ಮೃತದೇಹ ಪತ್ತೆಯಾಗಿದೆ. ಬಳಿಕ ನಗರದ ಪಳ್ಳದ ಸ್ಮಶಾನದಲ್ಲಿ ಸಂಸ್ಕರಿಸಲಾಯಿತು.