ಸರಕಾರ ನೀಡಿದ ಸ್ಥಳ ಸಂರಕ್ಷಿಸಲು ಒತ್ತಾಯಿಸಿ ಬೇಳ ಗ್ರಾಮ ಕಚೇರಿಗೆ ಮುತ್ತಿಗೆ

ನೀರ್ಚಾಲು: ಸರಕಾರ ನೀಡಿದ ಜಾಗ, ರಸ್ತೆ, ಮನೆ ಎಂಬಿವುಗಳನ್ನು ಸಂರಕ್ಷಿ ಸಬೇಕೆಂದು ಒತ್ತಾಯಿಸಿ ಏಣಿಯರ್ಪು ಲೈಫ್ ಹೌಸ್ ವಿಲ್ಲಾದ  ನಿವಾಸಿಗಳು ಬೇಳ ಗ್ರಾಮ ಕಚೇರಿಗೆ ನಿನ್ನೆ  ಮಾರ್ಚ್ ನಡೆಸಿದರು. ಏಣಿಯರ್ಪು ಲೈಫ್ ವಿಲ್ಲಾದ ನಿವಾಸಿಗಳು ರೂಪೀಕರಿಸಿದ  ಕ್ರಿಯಾ ಸಮಿತಿ ಆಶ್ರಯದಲ್ಲಿ  ಚಳವಳಿ ನಡೆಸಲಾಯಿತು. ಇಲ್ಲಿ ಸರಕಾರ ನೀಡಿದ ಸ್ಥಳವನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಿಸು ತ್ತಿದ್ದಾರೆ ಎಂದು ಕ್ರಿಯಾ ಸಮಿತಿ ಆರೋಪಿಸಿದೆ.  ಮಧೂರು ರಸ್ತೆಯಿಂದ ಆರಂಭಗೊಂಡ ಮೆರವಣಿಗೆಯನ್ನು ಪೊಲೀಸರು ತಡೆದರು. ಬಳಿಕ  ನಡೆದ ಪ್ರತಿಭಟನೆಯನ್ನು ಪುತ್ತಿಗೆ ಪಂಚಾಯತ್  ಅಧ್ಯಕ್ಷ ಡಿ. ಸುಬ್ಬಣ್ಣ ಆಳ್ವ ಉದ್ಘಾಟಿಸಿ ದರು.  ಕ್ರಿಯಾ ಸಮಿತಿ ಅಧ್ಯಕ್ಷ ಲತೀಫ್ ಕೆ.ಎಂ. ಅಧ್ಯಕ್ಷತೆ ವಹಿಸಿದರು. ಸಂಚಾಲಕ ಎನ್. ಸೀನತ್ ಸ್ವಾಗತಿಸಿ ದರು. ಪ್ರಕಾಶ್ ಅಮ್ಮಣ್ಣಾಯ, ಸಯ್ಯದ್ ಸೈನುಲ್ ಆಬಿದ್, ಕೆ. ಶಾರದ, ಸುಬೈರ್ ಬಾಪಾಲಿ ಪೊನಂ, ಅಬ್ದುಲ್ ಖಾದರ್ ಮಾನ್ಯ, ಉದಯ ತಲ್ಪಣಾಜೆ, ಎಂ.ಎಸ್. ಯೋಗೇಶ್ ಮೊದಲಾದವರು ಮಾತನಾಡಿದರು.

You cannot copy contents of this page