ಸರ್ವೀಸ್ ರಸ್ತೆಯಲ್ಲಿ ಸಂಚರಿಸದ ಕೆಎಸ್‌ಆರ್‌ಟಿಸಿ : ಮೊಗ್ರಾಲ್‌ನಲ್ಲಿ ಪ್ರಯಾಣಿಕರಿಗೆ ಸಂಕಷ್ಟ

ಕಾಸರಗೋಡು: 22 ದಿನಗಳು ಮುಚ್ಚಿದ ಬಳಿಕ ಮೊಗ್ರಾಲ್‌ನಲ್ಲಿ ಸರ್ವೀಸ್ ರಸ್ತೆ ತೆರೆದು ಕೊಟ್ಟರೂ ಕೆಎಸ್‌ಆರ್‌ಟಿಸಿ ಬಸ್‌ಗಳು ಈ ರಸ್ತೆಯಲ್ಲಿ ಸಂಚರಿಸದೆ ರಾಷ್ಟ್ರೀಯ ಹೆದ್ದಾರಿ ಮೂಲಕವೇ ಸಂಚರಿಸುತ್ತಿರುವು ದಾಗಿ ಸ್ಥಳೀಯರು ದೂರಿದ್ದಾರೆ. ಪ್ರಯಾಣಿಕರಿಗೆ ಇದು ಭಾರೀ ಸಂಕಷ್ಟ ಉಂಟುಮಾಡುತ್ತಿದೆ. ದುರಸ್ತಿ ಕೆಲಸದ ಹೆಸರಲ್ಲಿ ಮೊಗ್ರಾಲ್ ಪೇಟೆಯ ಸರ್ವೀಸ್ ರಸ್ತೆಯನ್ನು 22 ದಿನಗಳ ಕಾಲ ಮುಚ್ಚಲಾಗಿತ್ತು. ಸ್ಥಳೀಯ ಪ್ರತಿನಿಧಿ ರಿಯಾಸ್ ಯುಎಲ್‌ಸಿಸಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ರಸ್ತೆಯನ್ನು ತಾತ್ಕಾಲಿಕವಾಗಿ ತೆರೆದು ನೀಡಲಾಗಿತ್ತು. ಆದರೆ ಕೆಎಸ್‌ಆರ್‌ಟಿಸಿ ಬಸ್‌ಗಳು ಈ ಮೂಲಕ ಸಂಚರಿಸದಿರು ವುದು ಸಂಕಷ್ಟಕ್ಕೆ ಕಾರಣವಾಗಿದೆ.

You cannot copy contents of this page