ಸರ್ವೀಸ್ ರಸ್ತೆಯ ಹಂಪ್‌ನಲ್ಲಿ ಚಾಲಕನ ಅಶ್ರದ್ಧೆ: ಪ್ರಯಾಣಿಕ ಬಿದ್ದು ಗಾಯ
ಕುಂಬಳೆ: ರಾಷ್ಟ್ರೀಯ ಹೆದ್ದಾರಿ ಯ ಸರ್ವೀಸ್ ರಸ್ತೆಯಲ್ಲಿ ಹಂಪ್‌ನ ಮೇಲೆ ವೇಗ ಕಡಿಮೆಮಾಡದೆ ಸಂಚರಿಸಿದ ಬಸ್‌ನೊಳಗೆ ಪ್ರಯಾ ಣಿಕನೋರ್ವ ಬಿದ್ದು ಗಾಯಗೊಂಡ ಘಟನೆ ನಡೆದಿದೆ.
ಕುಂಬಳೆ ಕೊಡ್ಯಮೆ ನಿವಾಸಿ ಕೆ.ಕೆ. ಮುಹಮ್ಮದ್ ಹನೀಫ್ (48) ಬಿದ್ದುಗಾಯಗೊಂಡಿದ್ದಾರೆ. ಅವರ ಒಂದು ಹಲ್ಲು ಕಿತ್ತುಹೋಗಿದ್ದು, ತುಟಿಗೆ ಗಾಯಗಳಾಗಿದೆ. ನಿನ್ನೆ ಮಧ್ಯಾಹ್ನ ಒಂದು ಗಂಟೆ ವೇಳೆ ಕಾಸರಗೋಡು ತಾಳಿಪಡ್ಪಿನಲ್ಲಿ ಅಪಘಾತವುಂಟಾಗಿದೆ. ಕಾಸರಗೋಡಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕರ್ನಾಟಕ ಕೆಎಸ್‌ಆರ್ ಟಿಸಿ ಬಸ್‌ನಲ್ಲಿ ಮುಹಮ್ಮದ್ ಹನೀಫ್ ಪ್ರಯಾಣಿಸುತ್ತಿದ್ದರು. ಬಸ್ ತಾಳಿಪಡ್ಪುವಿಗೆ ತಲುಪಿದಾಗ ಹಂಪ್‌ನ ಮೇಲೆ ವೇಗದಲ್ಲಿ ಬಸ್ ಸಂಚರಿಸಿದೆ. ಈ ವೇಳೆ ಬಸ್ ಜಂಪ್ ಹೊಡೆದಿದ್ದು, ಇದರಿಂದ ಮುಹಮ್ಮದ್ ಹನೀಫ್ ಮುಂದಕ್ಕೆ ಎಸೆಯಲ್ಪಟ್ಟಿದ್ದಾರೆ. ಇತರ ಪ್ರಯಾಣಿಕರುಕೂಡಾ ಬಿದ್ದಿದ್ದರು. ಅವರಿಗೆ ಗಾಯಗಳಾಗಿಲ್ಲ. ಬಸ್ ಕುಂಬಳೆಗೆ ತಲುಪಿದ ಬಳಿಕ ಪ್ರಯಾ ಣಿಕರನ್ನು ಇಳಿಸಿ ಮುಹಮ್ಮದ್ ಹನೀಫರನ್ನು ಸಹಕಾರಿ ಆಸ್ಪತ್ರೆಗೆ ತಲುಪಿಸಲಾಯಿತು.