ಸವಾಕ್ ಜಿಲ್ಲಾ ರಜತ ಮಹೋತ್ಸವ ನಾಳೆ
ಕುಂಬಳೆ: ೧೯೯೮ ಮೇಯಲ್ಲಿ ರೂಪೀಕರಣಗೊಂಡ ಸ್ಟೇಜ್ ಆರ್ಟಿಸ್ಟ್ ಆಂಡ್ ವರ್ಕರ್ಸ್ ಅಸೋಸಿ ಯೇಶನ್ ಕೇರಳ (ಸವಾಕ್)ನ ಜಿಲ್ಲಾ ಮಟ್ಟದ ರಜತ ಮಹೋತ್ಸವ ನಾಳೆ ಅಪರಾಹ್ನ ೧.೩೦ರಿಂದ ಕಾಸರಗೋಡು ನಗರ ಸಭಾ ಕಾನ್ಫರೆನ್ಸ್ ಸಭಾಂಗಣದಲ್ಲಿ ನಡೆಯಲಿದೆ. ಕೇರಳದ ೩೭ ವಿಭಾಗದ ಕಲೆಗಳ ನ್ನು ಒಂದೇ ವೇದಿಕೆಯಲ್ಲಿ ತಂದ ಈ ಸಂಘಟನೆಯು ರೂಪೀಕರಣಗೊಂಡು ೨೫ ವರ್ಷ ಪೂರ್ಣಗೊಂಡಿದೆ. ಕಲಾವಿದರ ಕ್ಷೇಮನಿಧಿ, ಪಿಂಚಣಿ ಲಭಿಸುವಲ್ಲಿ ಮತ್ತು ಇತರ ಬೇಡಿಕೆ ಗಳನ್ನು ಈಡೇರಿಸಲು ಹಲವಾರು ಧರಣಿ ಸತ್ಯಾಗ್ರಹಗಳನ್ನು ನಡೆಸಿ ಯಶಸ್ವಿಯಾಗಿದೆ. ನಾಳೆ ೧.೩೦ರಿಂದ ಯಕ್ಷಗಾನ, ನೃತ್ಯ ನಡೆಯಲಿದೆ. ಸಂಜೆ ೪ಕ್ಕೆ ರಜತಮಹೋತ್ಸವ ಸಭೆಯನ್ನು ಕೇರಳ ಜನಪದ ಅಕಾಡೆಮಿ ಅಧ್ಯಕ್ಷ ಎಂ.ವಿ. ಅಜಯ ಕುಮಾರ್ ಉದ್ಘಾಟಿಸುವರು. ಸವಾರ್ ಜಿಲ್ಲಾಧ್ಯಕ್ಷ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಕಾರ್ಯದರ್ಶಿ ಎಂ. ಉಮೇಶ್ ಸಾಲ್ಯಾನ್ ಅಧ್ಯಕ್ಷತೆ ವಹಿಸುವರು ಸವಾಕ್ ರಾಜ್ಯ ಅಧ್ಯಕ್ಷ ಜಿ.ಕೆ. ಪಿಳ್ಳೆ ಮುಖ್ಯ ಭಾಷಣ ಮಾಡುವರು.ಶಾಸಕ ಎನ್.ಎ ನೆಲ್ಲಿಕುನ್ನು ಹಾಗೂ ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ, ಕೆ.ವಿ. ಕುಂಞಿರಾಮನ್, ರತೀಶ್ ರಮೇಶ್ಚಂದ್ರ ಕಾಸರಗೋಡು ಅತಿಥಿಗಳಾಗಿರುವರು. ಶತಾಯುಷಿ ವಿದ್ವಾನ್ ಬಾಬು ರೈ ಅವರನ್ನು ಈ ಸಂದರ್ಭ ಸನ್ಮಾನಿಸಲಾಗುವುದು. ಸುದರ್ಶನ ವರ್ಣ, ವಿನೋದ್ ಕುಮಾರ್ ಅಜುಂಬಿತ, ಸನ್ನಿ ಅಗಸ್ಟಿನ್, ಜೀನ್ ಲವೀನಾ ಮೊಂತೇರೊ, ಸುಬೈರ್ ಪಿ.ಟಿ, ನ್ಯಾಯವಾದಿ ವಿಜಯನ್ ಪಿ.ಪಿ, ನರಸಿಂಹ ಬಲ್ಲಾಳ್, ರಮೇಶ ಶೆಟ್ಟಿ ಬಾಯಾರ್, ಉಮೇಶ್ ಮಾಸ್ತರ್ ಫ್ಯೂಶನ್, ಸುಜಾತಾ ಮಂಜೇಶ್ವರ, ಮುಕುಂದ ಬಾಯಾರ್ ಮೊದಲಾದವರು ಉಪಸ್ಥಿತರಿರುವರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ, ಗಾನಮೇಳ ನಡೆಯಲಿದೆ.