ಸಹಕಾರಿ ಸಂಘದ ಕಾರ್ಯದರ್ಶಿ 4.76  ಕೋಟಿ ರೂ. ಲಪಟಾಯಿಸಿದ ಪ್ರಕರಣ: ಹಣವನ್ನು ರಿಯಲ್ ಎಸ್ಟೇಟ್‌ನಲ್ಲಿ ಠೇವಣಿಯಿರಿಸಿರುವುದಾಗಿ ಸೂಚನೆ

ಮುಳ್ಳೇರಿಯ: ಸಿಪಿಎಂ ನಿಯಂ ತ್ರಣದಲ್ಲಿರುವ ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ-ಆಪರೇಟಿವ್ ಸೊಸೈಟಿ ಯಿಂದ ೪.೭೬ ಕೋಟಿ ರೂಪಾಯಿಗಳ ವಂಚನೆ ನಡೆಸಿದ ಸೆಕ್ರೆಟರಿ ಕೆ. ರತೀಶ್, ಹಣವನ್ನು ರಿಯಲ್ ಎಸ್ಟೇಟ್‌ನಲ್ಲಿ ಠೇವಣಿ ಹೂಡಿರುವುದಾಗಿ ಸೂಚನೆ ಯಿದೆ. ವಂಚನೆಗೈದ ಹಣವನ್ನು ವಯನಾಡು ಹಾಗೂ ಬೆಂಗಳೂರಿನಲ್ಲಿ  ರತೀಶ್ ಠೇವಣಿ ಹೂಡಿದ್ದಾರೆಂಬ ಮಾಹಿತಿ ತನಿಖಾ ತಂಡದಿಂದ ಲಭಿಸಿದೆ. ವಯನಾಡು ಹಾಗೂ ಬೆಂಗಳೂರಿನಲ್ಲಿ ಭೂಮಿ ಖರೀದಿಸಿರು ವುದಾಗಿಯೂ ಹೇಳಲಾಗುತ್ತಿದೆ. ಈ ಕುರಿತಾದ ದಾಖ ಲೆಗಳು ಪೊಲೀಸರಿಗೆ ಲಭಿಸಿರುತ್ತದೆ.

ಇದೇ ವೇಳೆ ಕೋಟ್ಯಂತರ ರೂಪಾಯಿಗಳನ್ನು ಲಪಟಾಯಿಸಿದರೂ ಜೀವನ ರೀತಿಯಲ್ಲಿಯಾವುದೇ ಬದಲಾವಣೆ ಉಂಟಾಗದಿರುವುದರಿಂದ ಸಂಶಯ ಹುಟ್ಟಿಕೊಳ್ಳಲಿಲ್ಲ. ಈ ಹಿಂದೆ ರತೀಶ್‌ಗೆ ಹಳೆಯ ಮಾರುತಿ 800 ಕಾರಿತ್ತು. ಹಳೆಯ ಕಾರು ಮಾರಾಟ ನಡೆಸಿ ಕೆನರಾ ಬ್ಯಾಂಕ್‌ನಿಂದ ಸಾಲ ತೆಗೆದು ಸೆಕೆಂಡ್‌ಹ್ಯಾಂಡ್ ಕಾರು ಖರೀದಿ ಸಿದ್ದರು. ಮನೆಯನ್ನು ಸುಂದರಗೊಳಿ ಸುವುದಾಗಲೀ, ಆಡಂಬರ ಬಟ್ಟೆಬರೆ ಖರೀದಿಸುವುದಾಗಲೀ ಮಾಡಲಿಲ್ಲ. ರಾಜಕೀಯ ಚಟುವಟಿಕೆ ಮೂಲಕ ಸಮಾಜದಲ್ಲಿ ಗಳಿಸಿದ ಅಂಗೀಕಾರ ಹಾಗೂ ನಂಬಿಕೆಯನ್ನು ರತೀಶ್ ವಂಚನೆಗೆ ಬಳಸಿಕೊಂಡಿದ್ದಾರೆ.

ಸಿಪಿಎಂನ ಮುಳ್ಳೇರಿಯ ಲೋ ಕಲ್ ಕಮಿಟಿ ಸದಸ್ಯ ರತೀಶ್‌ರ ವಂಚನೆ ಪಕ್ಷಕ್ಕೂ ತಿಳಿದಿರಲಿಲ್ಲವೆನ್ನಲಾಗಿದೆ.  ಇದೇ ವೇಳೆ ಒಬ್ಬ ವ್ಯಕ್ತಿಗೆ ಏಕಾಂಗಿಯಾಗಿ ಈ ರೀತಿಯ ವಂಚನೆ ನಡೆಸಲು ಸಾಧ್ಯವೇ ಎಂಬ ಪ್ರಶ್ನೆಯೂ ಹುಟ್ಟಿಕೊಳ್ಳುತ್ತಿದೆ. ಇಲ್ಲದ ವ್ಯಕ್ತಿಗಳ ಹೆಸರಲ್ಲಿ ಚಿನ್ನದ ಮೇಲೆ ಸಾಲ ತೆಗೆದು ಅಪೆಕ್ಸ್ ಬ್ಯಾಂಕ್ ಸೊಸೈಟಿಗೆ ನೀಡಿದ ಹಣವನ್ನು ತಾನು ಕೈವಶವಿರಿಸಿಕೊಂಡು ವಂಚನೆ ನಡೆಸಲಾಗಿದೆ.

ಸಹಕಾರಿ ಇಲಾಖೆ ನಡೆಸಿದ ತನಿಖೆ ಯಲ್ಲಿ ವಂಚನೆ ಬಯಲಾಗಿದೆ. ಅನಂತರ ಸೊಸೈಟಿಯ ಅಧ್ಯಕ್ಷ ಪೊಲೀ ಸರಿಗೆ ದೂರು ನೀಡಿದ್ದಾರೆ. ರತೀಶ್ ವಿರುದ್ಧ ಜಾಮೀನು ರಹಿತ ಕಾಯ್ದೆಗಳನ್ನು ಹೇರಿ ಆದೂರು ಪೊಲೀಸರು ಕೇಸು ದಾಖಲಿ ಸಿಕೊಂಡಿದ್ದಾರೆ.  ತಲೆಮರೆಸಿಕೊಂಡಿರುವ ರತೀಶ್ ರನ್ನು ಸೆರೆಹಿಡಿಯಲಿರುವ ಪ್ರಯತ್ನ ವನ್ನು ತನಿಖಾ ತಂಡ ಮುಂದುವರಿಸಿದೆ. 

You cannot copy contents of this page