ಸಾಂಕ್ರಾಮಿಕ ಜ್ವರ ತಡೆಗೆ ಕ್ರಮ: ಆಸ್ಪತ್ರೆಗಳಲ್ಲಿ ಜ್ವರ ಕ್ಲಿನಿಕ್, ಔಷಧಿ ವ್ಯವಸ್ಥೆ
ತಿರುವನಂತಪುರ: ಅತಿಯಾದ ಉಷ್ಣತೆಯ ಬೆನ್ನಲ್ಲೇ ಸುರಿದ ಬೇಸಿಗೆ ಮಳೆಯ ಕಾರಣದಿಂದ ವಿವಿಧ ರೀತಿಯ ಸಾಂಕ್ರಾಮಿಕ ಜ್ವರಗಳು ಹರಡುವ ಸಾಧ್ಯತೆ ಇದೆಯೆಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಕರ್ಯ ಏರ್ಪಡಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಇದರಂತೆ ಆಸ್ಪತ್ರೆಗಳಲ್ಲಿ ಔಷಧಿ ಖಚಿತಪಡಿಸಲು ಹಾಗೂ ಜ್ವರದ ಕ್ಲಿನಿಕ್‌ಗಳನ್ನು ಆರಂಭಿಸಲು ಸಚಿವೆ ವೀಣಾ ಜೋರ್ಜ್ ಕರೆದ ಉನ್ನತ ಮಟ್ಟದ ಸಭೆಯಲ್ಲಿ ಕರೆ ನೀಡಿದ್ದಾರೆ. ಆಸ್ಪತ್ರೆಗಳಲ್ಲಿ ಐಸೋಲೇಶನ್ ಬೆಡ್‌ಗಳನ್ನು ಕಾದಿರಿಸಲಾಗುವುದು. ಔಷಧಿ ದಾಸ್ತಾನು ೩೦ ಶೇಕಡಾಕ್ಕಿಂತ ಕಡಿಮೆಯಾಗುವ ಮುಂಚಿತ ಸಂಬಂಧಪಟ್ಟವರಿಗೆ ತಿಳಿಸಬೇಕೆಂದೂ ಆರೋಗ್ಯರಂಗದ ಕಾರ್ಯಕರ್ತರಿಗೆ ನಿರ್ದೇಶಿಸಲಾಗಿದೆ. ಸಾರ್ವಜನಿಕರ ವಾಸಸ್ಥಳದಲ್ಲಿ, ಹಾಸ್ಟೆಲ್‌ಗಳಲ್ಲಿ ಶುಚೀಕರಣ ಖಚಿತಪಡಿಸಲಾ ಗುವುದು. ಬಾವಿಗಳ ಸಹಿತ ಕುಡಿಯುವ ನೀರಿನ ಮೂಲಗಳನ್ನು ಶುಚೀಕರಿಸಲಾಗುವುದು.