ಸಾಂಸ್ಕೃತಿಕ ನಿಲಯ ಹೆಸರಲ್ಲಿ ವಿವಾದ : ನಗರಸಭಾ ಕೌನ್ಸಿಲ್ ಸಭೆಯಲ್ಲಿ ಗದ್ದಲ
ಕಾಸರಗೋಡು: ಕಾಸರಗೋಡು ನಗರಸಭೆಯಲ್ಲಿ ನಿನ್ನೆ ನಡೆದ ಕೌನ್ಸಿಲ್ ಸಭೆ ಸಾಂಸ್ಕೃತಿಕ ನಿಲಯ ಸ್ಥಾಪನೆ ಹೆಸರಲ್ಲಿ ಹುಟ್ಟಿಕೊಂಡ ವಿವಾದದಿಂದ ಅಲ್ಲೋಲಕಲ್ಲೋಲಗೊಂಡಿದೆ. ಇದರಿಂದ ಅಜೆಂಡಾವನ್ನು ಪೂರ್ಣವಾಗಿ ಪರಿಗಣಿಸಿದೆ ಸಭೆಯನ್ನು ಕೊನೆಗೊಳಿಸಬೇಕಾಗಿ ಬಂತು.
ನಗರಸಭೆಯ ಪಚ್ಚಕ್ಕಾಡ್ ವಾರ್ಡ್‌ನಲ್ಲಿ ಪ್ರಸ್ತುತವಿರುವ ಸಾಂಸ್ಕೃತಿಕ ನಿಲಯದಲ್ಲಿ ನೂತನವಾಗಿ ಹೆಲ್ತ್ ಸೆಂಟರ್ ಸ್ಥಾಪಿಸಿ ಅನಂತರ ಅದೇ ವಾರ್ಡ್‌ನಲ್ಲಿ ಸಾಂಸ್ಕೃತಿಕ ನಿಲಯ ಸ್ಥಾಪಿಸಲಿರುವ ಅನುಮತಿ ನೀಡಲಿರುವ ಸಭೆಯ ಏಳನೇ ಅಜೆಂಡಾದ ವಿರುದ್ಧ ಲೀಗ್ ಕೌನ್ಸಿಲರ್‌ಗಳಾದ ಮಮ್ಮುಚಾಲ, ಮಜೀದ್ ಕೊಲ್ಲಂಪಾಡಿ, ಮುಸ್ತಾಕ್ ಚೇರಂಗೈ ಎಂಬಿವರು ಠರಾವು ಮಂಡಿಸಿದರು. ಅಣಂಗೂರು ಪ್ರದೇಶದಲ್ಲಿ ಹೆಲ್ತ್ ಸೆಂಟರ್ ಮಂಜೂರು ಮಾಡಿದಾಗ ಅಲ್ಲಿಗೆ ಎಲ್ಲರಿಗೂ ಸುಗಮವಾಗಿ ತಲುಪಲಿ ರುವ ಸ್ಥಳದಲ್ಲಿ ನಿರ್ಮಿಸಬೇಕೆಂದು ಲೀಗ್ ಕೌನ್ಸಿಲರ್‌ಗಳು ಆಗ್ರಹಪ ಟ್ಟಿದ್ದರು. ಆದರೆ ಆ ಬೇಡಿಕೆಯನ್ನು ನಿಷೇಧಿಸಿ ಪಚ್ಚಕ್ಕಾಡ್ ಸಾಂಸ್ಕೃತಿಕ ನಿಲಯದಲ್ಲಿ ಹೆಲ್ತ್ ಸೆಂಟರ್ ಸ್ಥಾಪಿಸಲಾಗಿದೆ.
ಸಾಂಸ್ಕೃತಿಕ ನಿಲಯ ಪಚ್ಚಕ್ಕಾಡ್ ನಲ್ಲಿ ಅಗತ್ಯವಿಲ್ಲವೆಂಬ ಅಭಿಪ್ರಾಯ ವೂ ಕೇಳಿಬಂದಿರುವುದಾಗಿ ಹೇಳಲಾ ಗುತ್ತಿದೆ. ಆದರೆ ಹೆಲ್ತ್ ಸೆಂಟರ್ ಆರಂ ಭಿಸಿದ ಬಳಿಕ ಅದೇ ವಾರ್ಡ್‌ನಲ್ಲೇ ಸಾಂಸ್ಕೃತಿಕ ನಿಲಯವನ್ನು ಮತ್ತೆ ನಗರಸಭಾ ಫಂಡ್ ಬಳಸಿ ಸ್ಥಾಪಿಸಲಿರುವ ಯತ್ನ ಪಕ್ಷಪಾತ ನೀತಿಯಾಗಿದೆಯೆಂದು ಮುಸ್ಲಿಂ ಲೀಗ್ ಕೌನ್ಸಿಲರ್‌ಗಳು ಸಭಯಲ್ಲಿ ತಿಳಿಸಿದ್ದಾರೆ. ಈ ವೇಳೆ ಗದ್ದಲ ಸೃಷ್ಟಿಯಾಗಿದೆ. ಠರಾವನ್ನು ಬಿಜೆಪಿ ಕೌನ್ಸಿಲರ್‌ಗಳ ಸಹಿತ ಹಲವರು ಬೆಂಬಲಿಸಿದರು. ಸಭೆಯಲ್ಲಿ ಇತರ ಆರು ಅಜೆಂಡಾಗಳನ್ನು ಮಂಜೂರು ಮಾಡಿ ಚೆಯರ್‌ಮೆನ್ ಸಭೆಯಿಂದ ಮರಳಿದರು. ಆಡಳಿತ ಪಕ್ಷದ ನೇತೃತ್ವದಲ್ಲಿ ಭ್ರಷ್ಟಾಚಾರ, ಪಕ್ಷಪಾತ ನೀತಿ ನಡೆಯುತ್ತಿರುವುದು ಅದೇ ಪಕ್ಷದ ಸದಸ್ಯರಿಗೂ ತಿಳಿದುಬಂ ದಿದೆಯೆಂ ಬುವುದಕ್ಕೆ ಉದಾಹರಣೆ ನಿನ್ನೆ ನಡೆದ ಗದ್ದಲವೇ ಆಗಿದೆಯೆಂದು ವಿಪಕ್ಷ ನೇತಾರ ರಮೇಶ್ ತಿಳಿಸಿದ್ದಾರೆ.