ಸಾಫ್ಟ್‌ವೇರ್ ಇಂಜಿನಿಯರ್ ಯುವತಿಯನ್ನು ಹೋಟೆಲ್ ಕೊಠಡಿಯಲ್ಲಿ ಗುಂಡಿಕ್ಕಿ ಕೊಲೆ
ಪುಣೆ: ಸಾಫ್ಟ್ ವೇರ್ ಇಂ ಜಿನಿಯರ್ ಆಗಿರುವ ಯುವತಿ ಹೋಟೆಲ್ ಕೊಠಡಿಯಲ್ಲಿ ಗುಂಡೇಟು ತಗಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಲಕ್ನೋ ನಿವಾಸಿ ವಂದನಾ ದ್ವಿವೇದಿ (೨೬) ಕೊಲೆಗೀಡಾದ ಯುವತಿ. ಲಕ್ಷ್ಮೀನಗರ ವಲಯದ ಹೋಟೆಲ್‌ನ ಕೊಠಡಿಯಲ್ಲಿ ಘಟನೆ ನಡೆದಿದೆ. ಯುವತಿಯ ಸ್ನೇಹಿತನೇ ಕೊಲೆ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕಳೆದೆರಡು ವರ್ಷ ಗಳಿಂದ ಪುಣೆ ಬಳಿಯ ರಾಜೀವ್ ಗಾಂಧಿ ಪಾರ್ಕ್ ನಲ್ಲಿರುವ ಇನ್ಫೋಸಿಸ್ ಕಂಪೆನಿ ಯಲ್ಲಿ ಯುವತಿ ಕೆಲಸ ನಿರ್ವ ಹಿಸುತ್ತಿದ್ದಳು. ಘಟನೆಗೆ ಸಂಬಂ ಧಿಸಿ ಲಕ್ನೋ ನಿವಾಸಿ ಯಾದ ಋಷಬ್ ನಿಗಂ ಎಂಬಾತನನ್ನು ಪಿಸ್ತೂಲು ಸಹಿತ ಬಂಧಿಸಲಾಗಿದೆ.