ಸಾರಿಗೆ ಕಾನೂನು ಉಲ್ಲಂಘನೆ: ಕುಂಬಳೆಯಲ್ಲಿ 15ರಷ್ಟು ದ್ವಿಚಕ್ರ ವಾಹನಗಳ ವಶ

ಕುಂಬಳೆ: ವಾಹನ ಅಪ ಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ಕಾನೂ ನು ಉಲ್ಲಂಘಿ ಸುವವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳತೊಡಗಿದ್ದಾರೆ. ಇದರಂತೆ ಬಂದ್ಯೋಡು ಪೇಟೆಯಲ್ಲಿ ಡಿವೈಎಸ್ಪಿ ಸಿ.ಕೆ. ಸುನಿಲ್ ಕುಮಾರ್ ನೇತೃತ್ವದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ  15ರಷ್ಟು ದ್ವಿಚಕ್ರ ವಾಹನಗಳನ್ನು ವಶಪಡಿಸಲಾಗಿದೆ. ಲೈಸನ್ಸ್ ಇಲ್ಲದೆ ವಾಹನ ಚಲಾಯಿಸಿದವರನ್ನು ಸೆರೆಹಿಡಿಯಲಾಗಿದೆ.

 ವಾಹನಗಳನ್ನು ಕಸ್ಟಡಿಗೆ ತೆಗೆದು ಠಾಣೆಗೆ ತಲುಪಿಸಲಾಗಿದೆ. ಡ್ರೈವಿಂಗ್ ಲೈಸನ್ಸ್ ಇಲ್ಲದವರು, ಪ್ರಾಯಪೂರ್ತಿ ಯಾಗದವರು ವಾಹನ ಚಲಾಯಿಸು ವುದರಿಂದ ಅಪಘಾತಗಳು ಹೆಚ್ಚುತ್ತಿರುವುದಾಗಿ ತಿಳಿದುಬಂದ ಹಿನ್ನೆಲೆಯಲ್ಲಿ  ಪೊಲೀಸರು ಕಾರ್ಯಾ ಚರಣೆಯನ್ನು ತೀವ್ರಗೊಳಿಸಿದ್ದಾರೆ.  ಕಾರ್ಯಾಚರಣೆ ಮುಂದುವರಿಸು ವುದಾಗಿ ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page