ಸಾಲದ ಹೊರೆ: ಕೊಡಕ್ಕಾಡ್‌ನಲ್ಲಿ ವೃದ್ಧ್ದ ನೇಣು ಬಿಗಿದು ಸಾವು
ಕಾಸರಗೋಡು: ಸಾಲ ಬಾಧೆ ಹಿನ್ನೆಲೆಯಲ್ಲಿ ಕೊಡಕ್ಕಾಡ್ ನಿವಾಸಿ ವೃದ್ಧ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಚೀಮೇನಿ ಪೊಲೀಸ್ ಠಾಣೆ ವ್ಯಾಪ್ತಿಯ ಕೊಡಕ್ಕಾಡ್ ಓಲಾಟೆ ನಿವಾಸಿ ಒ. ರವೀಂದ್ರನ್ (70) ಆತ್ಮಹತ್ಯೆಗೈದವರು. ನಿನ್ನೆ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆ ಮಧ್ಯೆ ಘಟನೆ ನಡೆದಿದೆ. ಮನೆಯ ಮಹಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಇವರು ಕಂಡು ಬಂದಿದ್ದರು. ಕೂಡಲೇ ಚೆರುವತ್ತೂರಿನ ಖಾಸಗಿ ಆಸ್ಪತ್ರೆಗೆ ಕೊಂಡುಹೋಗಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಚೀಮೇನಿ ಪೊಲೀಸರು ಕೇಸು ದಾಖಲಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಕೊಂಡುಹೋಗಲಾಗಿದೆ.