ಸಾಲದ ಹೊರೆ: ಬ್ಯಾಂಕ್‌ನವರ ಬೆದರಿಕೆಯಿಂದ ಕುಟುಂಬ ಆತ್ಮಹತ್ಯೆಗೆತ್ನ; ಗೃಹಿಣಿ ಮೃತ್ಯು
ಪತ್ತನಂತಿಟ್ಟ: ಸಾಲದ ಹೊರೆಯ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆತ್ನಿಸಿದ ಮೂರು ಮಂದಿಯ ಕುಟುಂಬದ ಗೃಹಿಣಿ ಮೃತಪಟ್ಟರು. ಪತ್ತನಂತಿಟ್ಟ ಕೊಡುಮನ್‌ವೇಟಕ್ಕೋಟೆ ನಿವಾಸಿ ಲೀಲಾ (50) ಮೃತಪಟ್ಟವರು. ಪತಿ ನೀಲಾಂಭರನ್, ಪುತ್ರ ದಿಪಿನ್ ಕುಮಾರ್ ಎಂಬಿವರನ್ನು ಗಂಭೀರ ಸ್ಥಿತಿಯಲ್ಲಿ ಕೋಟ್ಟಯಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ಬೆಳಿಗ್ಗೆ ಅಸ್ವಸ್ಥ ಸ್ಥಿತಿಯಲ್ಲಿದ್ದ ನೀಲಾಂಭರನ್ ಈ ವಿಷಯವನ್ನು ಸಂಬಂಧಿಕನಿಗೆ ತಿಳಿಸಿದ್ದಾರೆ. ಮಾಹಿತಿ ತಿಳಿದು ನೆರೆಮನೆಯವರು ತಲುಪಿ ಅಸ್ವಸ್ಥ ಸ್ಥಿತಿಯಲ್ಲಿದ್ದ ಇವರನ್ನು ಕೂಡಲೇ ಪತ್ತನಂತಿಟ್ಟ ಜನರಲ್ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ತಪಾಸಣೆಯಲ್ಲಿ ಲೀಲಾ ಮೃತಪಟ್ಟಿರುವುದು ಖಚಿತಪಡಿಸಲಾಗಿದೆ. ಉದ್ಯೋಗ ಖಾತರಿ ಕಾರ್ಮಿಕೆಯಾಗಿದ್ದಾರೆ ಈಕೆ. ಇವರು 7೦,೦೦೦ ರೂ. ಬ್ಯಾಂಕ್‌ನಿಂದ ಸಾಲ ತೆಗೆದಿದ್ದರೆಂದೂ, ಮರುಪಾವತಿ ಸದೆ ಬಾಕಿ ಉಳಿದಿರುವ ಕಾರಣ ಬ್ಯಾಂಕ್‌ನವರು ಮನೆಗೆ ತಲುಪಿ ಜಪ್ತಿ ಬೆದರಿಕೆ ಒಡ್ಡಿರುವುದಾಗಿಯೂ, ಈ ನೋವಿನಿಂದ ಆತ್ಮಹತ್ಯೆಗೈದಿರು ವುದಾಗಿಯೂ ಹೇಳಲಾಗುತ್ತಿದೆ.