ಸಾಲವಾಗಿ ಮೊಬೈಲ್ ರೀಚಾರ್ಜ್ ಮಾಡದ ದ್ವೇಷ: ವ್ಯಾಪಾರಿಗೆ ಹಲ್ಲೆಗೈದ ಆರೋಪಿ ಬಂಧನ
ಕುಂಬಳೆ: ಸಾಲವಾಗಿ ಮೊಬೈಲ್ ರೀಚಾರ್ಚ್ ಮಾಡದ ದ್ವೇಷದಿಂದ ವ್ಯಾಪಾರಿಗೆ ಕಬ್ಬಿಣದ ಸರಳಿನಿಂದ ಹಲ್ಲೆಗೈದು ಗಾಯಗೊಳಿಸಿದ ಪ್ರಕರಣ ಕ್ಕೆ ಸಂಬಂಧಿಸಿ ಆರೋಪಿ ಯನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಇಚ್ಲಂಗೋಡು ನಿವಾಸಿ ಮೊಹಮ್ಮದ್ ಶರಫುದ್ದೀನ್ ಯಾನೆ ಶರಫು (30) ಎಂಬಾತ ಬಂಧಿತ ಆರೋಪಿಯಾ ಗಿದ್ದಾನೆ. ಕುಡಾಲುಮೇರ್ಕಳ ಕುಂಟಂಗೇರಡ್ಕದಲ್ಲಿ ಮೊಬೈಲ್ ಅಂಗಡಿ ನಡೆಸುವ ಕುಂಟಂಗೇರಡ್ಕದ ಅಬ್ದುಲ್ ರಿಯಾಸ್ (30) ಎಂಬವರಿಗೆ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಮೊಹಮ್ಮದ್ ಶರಫುದ್ದೀನ್‌ನನ್ನು ಬಂಧಿಸಲಾಗಿದೆ. ಈ ತಿಂಗಳ 23ರಂದು ಸಂಜೆ ಅಬ್ದುಲ್ ರಿಯಾಸ್‌ರ ಅಂಗಡಿಗೆ ತಲುಪಿದ ಮೊಹಮ್ಮದ್ ಶರಫುದ್ದೀನ್ ಸಾಲವಾಗಿ ಮೊಬೈಲ್ ರೀಚಾರ್ಚ್ ಮಾಡುವಂತೆ ತಿಳಿಸಿ ದ್ದಾನೆ. ಆದರೆ ಅದಕ್ಕೆ ಮುಂದಾಗದ ದ್ವೇಷದಿಂದ ರಿಯಾಸ್‌ರಿಗೆ ಕಬ್ಬಿಣದ ಸರಳಿನಿಂದ ಹಲ್ಲೆಗೈದು ಗಂಭೀರ ಗಾಯಗೊಳಿಸಿರುವುದಾಗಿ ದೂರಲಾ ಗಿದೆ. ಈ ಸಂಬಂಧ ಮೊಹಮ್ಮದ್ ಶರಫುದ್ದೀನ್ ವಿರುದ್ಧ ಪೊಲೀಸರು ನರಹತ್ಯಾಯತ್ನ ಕೇಸು ದಾಖಲಿಸಿ ಕೊಂಡಿದ್ದರು. ಬಂಧಿತ ಆರೋಪಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ.