ಸಾಹಿತಿ ವೈ. ಸತ್ಯನಾರಾಯಣರಿಗೆ ಕ.ಸಾ.ಪದಿಂದ ಅಭಿನಂದನೆ

ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನ ದಿನಾಚರಣೆಯಂಗವಾಗಿ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದಿಂದ ಹಿರಿಯ ಸಾಹಿತಿ ವೈ. ಸತ್ಯನಾರಾಯಣ ಕಾಸರಗೋಡು ಅವರಿಗೆ ಕಾಸರ ಗೋಡಿನ ಪರಿಷತ್ತು ಕಚೇರಿಯಲ್ಲಿ ಅಭಿನಂದನೆ ನಡೆಯಿತು. ವಿದ್ವಾನ್ ಎಸ್.ಬಿ ಖಂಡಿಗೆ ಪೆರ್ಲ ಸತ್ಯನಾರಾಯಣರನ್ನು ಗೌರವಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಞ ಡಾ.ಜಯ ಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಸನ್ಮಾನಿತರ ಪರಿಚಯ ಮಾಡಿದರು. ಮೀಯಪದವು ಹೈಯರ್ ಸೆಕೆಂಡರಿ ಶಾಲಾ ಪ್ರಾಂಶುಪಾಲ ರಮೇಶ, ಮುಖ್ಯ ಶಿಕ್ಷಕ ರಾಜಾರಾಮ ರಾವ್.ಟಿ, ಪ್ರಾಧ್ಯಾಪಕ ಹರೀಶ .ಜಿ, ಶಿಕ್ಷಕರಾದ ಅಬ್ದುಲ್ ರಶೀದ್ , ರಾಜಾ ರಾಮ, ಸ್ವಪ್ನ.ಎಂ ಉಪಸ್ಥಿತರಿದ್ದರು. ವೈ.ಸತ್ಯನಾರಾಯಣ ಕಾಸರಗೋಡು ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿ ದರು. ಅನುಜ್ಞಾಲಕ್ಷ್ಮಿ.ಪಿ, ಅನನ್ಯ.ಪಿ ಪ್ರಾರ್ಥನೆ ಹಾಡಿದರು. ಗೌರವ ಕಾರ್ಯದರ್ಶಿ ಶೇಖರಶೆಟ್ಟಿ ಬಾಯಾರು ಸ್ವಾಗತಿಸಿ, ಗೌ. ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ವಂದಿಸಿದರು.

You cannot copy contents of this page