ಸಿಎಂಆರ್‌ಎಲ್ ಪ್ರಕರಣ, ಪ್ರೋಸಿಕ್ಯೂಶನ್‌ಗೆ ಕೇಂದ್ರ ಅನುಮತಿ: ಮುಖ್ಯಮಂತ್ರಿಯ ಮಗಳು ವೀಣಾ ವಿಜಯನ್ ಸೇರಿದಂತೆ ಹಲವರ ವಿರುದ್ಧ ಕೇಸು ದಾಖಲು
ತಿರುವನಂತಪುರ: ಕಪ್ಪು ಮರಳು ಕಂಪೆನಿಯಾದ ಸಿಎಂಆರ್‌ಎಲ್‌ನಿಂದ ಮುಖ್ಯಮಂತ್ರಿ ಪಿಣರಾಯಿ ವಿಜ ಯನ್‌ರ ಮಗಳು ವೀಣಾ ವಿಜಯನ್ ಮತ್ತು ಅವರ ಮಾಲಕತ್ವದಲ್ಲಿರುವ ಕಂಪೆನಿಯಾದ ಎಕ್ಸೋಲೋಜಿಕ್ ಸೊಲ್ಯೂಶನ್ ಸೇರಿ ಅನಧಿಕೃತವಾಗಿ 2.7 ಕೋಟಿ ರೂ. ಪಡೆದು ವಂಚನೆ ನಡೆಸಿರುವ ಆರೋಪದಂತೆ ಸೀರೀಸ್ ಫ್ರೋಡ್ ಇನ್‌ವೆಸ್ಟಿಗೇಶನ್ ಆಫೀಸ್ (ಎಸ್‌ಎಫ್‌ಐಒ) ಪ್ರಕರಣ ದಾಖಲಿ ಸಿಕೊಂಡಿದೆ. ಇದರ ಆಧಾರದಲ್ಲಿ ಮುಖ್ಯಮಂತ್ರಿ ಮಗಳು ವೀಣಾ ವಿಜ ಯನ್ ಮತ್ತು ಅವರ ಮಾಲಕತ್ವದಲಿ ರುವ ಎಕ್ಸೋಲೋಜಿಕ್ ಸೊಲ್ಯೂಶನ್ ಆ ಸಂಸ್ಥೆಯ ಎಂ.ಡಿ ಶಶಿಧರನ್ ಕಾರ್ತೋ, ಸಿಎಂಆರ್‌ಎಲ್ ಫಿನಾನ್ಸ್ ಚೀಫ್ ಜನರಲ್ ಮೆನೇಜರ್ ಪಿ. ಸುರೇಶ್ ಕುಮಾರ್, ಚೀಫ್ ಫಿನಾನ್ಶಿಯಲ್ ಆಫೀಸರ್ ಕೆ. ಸುರೇಶ್ ಕುಮಾರ್, ಜೋಯಿಂಟ್ ಎಂ.ಡಿ ಶರಣ್ ಎಸ್ ಕಾರ್ತಾ, ಕಂಪೆನಿ ಆಡಿಟರ್‌ಗಳಾದ ಕೆ.ಎ. ಸಘೇಶ್ ಕುಮಾರ್, ಎ.ಕೆ. ಮುರಳೀಕೃಷ್ಣನ್, ಸಿ.ಎಂ.ಆರ್.ಎಲ್, ನಿಪುಣ ಇಂಟರ್ ನೇಶನಲ್, ಸಜ್ನಾ ಇಂಡಿಯಾ ಎಂಬ ಕಂಪೆನಿಗಳನ್ನು ಆರೋಪ ಪಟ್ಟಿಯಲ್ಲಿ ಹೆಸರಿಸಲಾಗಿದೆ.
ಆರೋಪಿಗಳ ವಿರುದ್ಧ ಪ್ರೋಸಿಕ್ಯೂ ಶನ್ ಕ್ರಮ (ಕಾನೂನುಕ್ರಮ) ಜರಗಿ ಸಲು ಕೇಂದ್ರ ಹಣಕಾಸು ಸಚಿವಾಲ ಯದ ಆಶ್ರಯದಲ್ಲಿ ಕಾರ್ಯವೆಸಗುತ್ತಿ ರುವ ಕಂಪೆನಿ ಸಚಿವಾಲಯ ಎಸ್‌ಎಫ್‌ಐ ಟಿಒಗೆ ಅನುಮತಿ ನೀಡಿದೆ. ಇದು ಆರು ತಿಂಗಳಿನಿಂದ ೧೦ ವರ್ಷಗಳ ತನಕ ಶಿಕ್ಷೆ ಹಾಗೂ ಜುಲ್ಮಾನೆ ಲಭಿಸುವ ಅಪರಾಧ ಕೃತ್ಯವಾಗಿದೆ. ಈ ಪ್ರಕರಣದ ಆರೋ ಪಿಗಳ ವಿರುದ್ಧ ಕಾನೂನುಕ್ರಮ ಜರಗಿ ಸಲು ಕೇಂದ್ರ ಸರಕಾರದ ಅನುಮತಿ ಲಭಿಸಿರುವ ಹಿನ್ನೆಲೆಯಲ್ಲಿ ಆರೋಪಿ ಗಳು ಶೀಘ್ರ ಬಂಧನಕ್ಕೊಳಗಾಗುವ ಸಾಧ್ಯತೆಯೂ ಇದೆ. ಮಾತ್ರವಲ್ಲ ಬಂಧನದ ಬಳಿಕ ಈ ಪ್ರಕರಣದ ತನಿಖೆ ಮುಂದುವರಿಯಲಿದೆ.
ಬಿಜೆಪಿ ನೇತಾರ ಶೋನ್‌ಜೋರ್ಜ್ ಇಂತಹ ಆರೋಪ ಹೊರಿಸಿ ಎಸ್‌ಎಫ್‌ಐಒಗೆ ದೂರು ನೀಡಿದ್ದರು. ಅದರ ಆಧಾರದಲ್ಲಿ ಎಸ್‌ಎಫ್‌ಐಒ ತನಿಖೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು ಅದಕ್ಕೆ ಸಂಬಂಧಿಸಿದ ಕಾನೂನುಕ್ರಮಕ್ಕೆ ಕೇಂದ್ರ ಸರಕಾರವೂ ಈಗ ಅನುಮತಿ ನೀಡಿದೆ.
ವೀಣಾ ವಿಜಯನ್‌ರ ವಿರುದ್ಧ ಕೇಸು ದಾಖಲುಗೊಂಡಿರುವುದು ಮುಖ್ಯಮಂತ್ರಿ ಮಾತ್ರವಲ್ಲ ಸಿಪಿಎಂನ್ನು ಸಂಕಷ್ಟದಲ್ಲಿ ಸಿಲುಕುವಂತೆ ಮಾಡಿದೆ.
ವೀಣಾ ವಿಜಯನ್‌ಗೆ ಪೂರ್ಣ ಬೆಂಬಲ ಘೋಷಿಸಿದ ಸಿಪಿಎಂ
ತಿರುವನಂತಪುರ: ಕಪ್ಪು ಮರಳು ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ಮಗಳು ವೀಣಾ ವಿಜಯನ್ ಸೇರಿದಂತೆ ಹಲವರ ವಿರುದ್ಧ ಸಿಎಂಆರ್‌ಎಲ್‌ಎಸ್ ಕೇಸು ದಾಖಲಿಸಿಕೊಂಡು ಅವರ ವಿರುದ್ಧ ಪ್ರೋಸಿಕ್ಯೂಷನ್ ಕ್ರಮ ಜರಗಿಸಲು ಕೇಂದ್ರ ಕಂಪೆನಿ ಸಚಿವಾಲಯ ಅನುಮತಿ ನೀಡಿದ ಬೆನ್ನಲ್ಲೇ ವೀಣಾ ವಿಜಯನ್‌ರಿಗೆ ಸಿಪಿಎಂ ಪೂರ್ಣ ಬೆಂಬಲ ಘೋಷಿಸಿದೆ. ಈ ಪ್ರಕರಣದಲ್ಲಿ ಆರೋಪಿಗಳು ಮತ್ತು ಆರೋಪ ಹೊತ್ತ ಕಂಪೆನಿಗಳೇ ಈ ಪ್ರಕರಣವನ್ನು ನೇರವಾಗಿ ಎದುರಿಸಲಿದೆ. ಆದರೆ ಸದ ಪಕ್ಷದಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗುವುದಿಲ್ಲವೆಂದು ಹೇಳಿರುವ ಸಿಪಿಎಂ, ವೀಣಾ ವಿಜಯನ್‌ರ ವಿರುದ್ಧ ಪುರಾವೆಗಳಿದ್ದಲ್ಲಿ ಅದನ್ನು ತನಿಖಾ ತಂಡ ಹೊರ ಬಿಡಲಿ ಎಂದೂ ಹೇಳಿದೆ.
ವೀಣಾ ವಿಜಯನ್ ಕೇಸಿನಲ್ಲಿ ಸಿಲುಕಿಕೊಂಡಿರುವುದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರನ್ನು ಮಾತ್ರವಲ್ಲ ಸಿಪಿಎಂನ್ನೂ ತೀವ್ರ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಸಿಪಿಎಂ ಪಾರ್ಟಿ ಕಾಂಗ್ರೆಸ್ (ಮಹಾ ಅಧಿವೇಶನ) ತಮಿಳುನಾಡಿನ ಮಧುರೈಯಲ್ಲಿ ನಡೆಯುತ್ತಿರುವ ವೇಳೆಯಲ್ಲೇ ಮುಖ್ಯಮಂತ್ರಿಯ ಪುತ್ರಿಯನ್ನು ಪ್ರಕರಣದಲ್ಲಿ ಆರೋಪಿಯನ್ನಾಗಿ ಸೇರ್ಪಡೆಗೊಳಿಸಲಾಗಿದೆ. ಅದು ಸಿಪಿಎಂನ್ನು ಗೊಂದಲದಲ್ಲಿ ಸಿಲುಕುವಂತೆ ಮಾಡಿದೆ.