ಸಿಪಿಎಂ ಕಾರ್ಯಕರ್ತ ನಿಧನ
ಉಪ್ಪಳ: ಮಂಗಲ್ಪಾಡಿ ಬೇರಿಕೆ ನಿವಾಸಿ ಸಿಪಿಎಂ ನೇತಾರ ದಿ| ನಾರಾಯಣರ ಪುತ್ರ ಸಿಪಿಎಂ ಕಾರ್ಯಕರ್ತ ಶೇಷಾದ್ರಿ (47) ನಿಧನರಾದರು. ಲಿವರ್ ಸಂಬಂಧ ಅಸೌಖ್ಯದಿಂದ ಬಳಲುತ್ತಿದ್ದರು. ಅವಿವಾಹಿತರಾಗಿದ್ದರು. ಮೃತರು ತಾಯಿ ಕಮಲ, ಸಹೋದರಿಯರಾದ ಶೈಲಜ, ಸೋನಿಯಾ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಸಹೋದರಿ ಸುಮಿತ ಈ ಹಿಂದೆ ನಿಧನರಾಗಿದ್ದಾರೆ.
ಮೃತರ ಮನೆಗೆ ಶಾಸಕ ಸಿ.ಎಚ್ ಕುಂಞಂಬು, ಮಾಜಿ ಶಾಸಕ ಸತೀಶ್ಚಂದ್ರನ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಸಹಿತ ಹಲವಾರು ಮಂದಿ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.