ಸಿಪಿಎಂ ಜಿಲ್ಲಾ ಕಾರ್ಯದರ್ಶಿಯಾಗಿ ಎಂ. ರಾಜಗೋಪಾಲನ್ ಆಯ್ಕೆ
ಕಾಸರಗೋಡು: ಸಿಪಿಎಂನ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಯಾಗಿ ಶಾಸಕ ಎಂ. ರಾಜಗೋಪಾ ಲನ್ ಆಯ್ಕೆಗೊಂಡಿ ದ್ದಾರೆ. ಜಿಲ್ಲಾ ಸಮಿತಿಗೆ 36 ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಹಳೆ ಜಿಲ್ಲಾ ಸಮಿತಿಯ ಏಳು ಮಂದಿಯನ್ನು ಹೊಸ ಜಿಲ್ಲಾ ಸಮಿತಿಯಿಂದ ಹೊರತುಪಡಿಸಲಾಗಿದೆ. 9 ಹೊಸ ಮುಖಗಳನ್ನು ಸಮಿತಿಗೆ ಸೇರ್ಪಡೆಗೊಳಿಸಲಾಗಿದೆ. ಎಂ.ಬಿ. ಬಾಲಕೃಷ್ಣನ್ ಸತತ ಎರಡು ಬಾರಿ ಜಿಲ್ಲಾ ಕಾರ್ಯದರ್ಶಿಯಾಗಿ ಆಯ್ಕೆಗೊಂಡಿ ದ್ದರು. ಅವರಿಗೆ 75 ವರ್ಷ ಮೀರಿದ ಹಿನ್ನೆಲೆಯಲ್ಲಿ ಅವರ ಬದಲು ಎಂ. ರಾಜಗೋಪಾಲನ್‌ರನ್ನು ಹೊಸ ಕಾರ್ಯದರ್ಶಿಯಾಗಿ ಆರಿಸಲಾಗಿದೆ. ನಿನ್ನೆ ಹೊಸದುರ್ಗದಲ್ಲಿ ಸಮಾಪ್ತಿಗೊಂಡ ಸಿಪಿಎಂ ಜಿಲ್ಲಾ ಸಮ್ಮೇಳನದಲ್ಲಿ ಈ ಹೊಸ ಕಾರ್ಯದರ್ಶಿಯ ಆಯ್ಕೆ ನಡೆದಿದೆ. ಪಕ್ಷದ ಕೇಂದ್ರ ಸಮಿತಿ ಸದಸ್ಯ ಇ.ಪಿ. ಜಯರಾಜನ್‌ರ ಸಾನಿಧ್ಯದಲ್ಲಿ ಒಂದು ತಾಸುಗಳ ತನಕ ನಡೆಸಲಾಗಿದೆ. ಚರ್ಚೆಯ ಬಳಿಕ ಹೊಸ ಜಿಲ್ಲಾ ಕಾರ್ಯದರ್ಶಿಯನ್ನಾಗಿ ಎಂ. ರಾಜಗೋಪಾಲರನ್ನು ಆರಿಸಲಾಗಿದೆ.
ಕಯ್ಯೂರು ನಿವಾಸಿಯಾಗಿರುವ ಎಂ. ರಾಜಗೋಪಾಲ 2016ರಿಂದಲೇ ತೃಕ್ಕರಿಪುರ ಪಕ್ಷದ ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯರಾಗಿ ಹಾಗೂ ಕಳೆದ ಹತ್ತು ವರ್ಷಗಳಿಂದ ಜಿಲ್ಲಾ ಸಮಿತಿ ಸದಸ್ಯರಾಗಿ ಮುಂದುವರಿಯುತ್ತಿದ್ದರು. ಇವರು ಈ ಹಿಂದೆ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ, ರಾಜ್ಯ ಜತೆ ಕಾರ್ಯ ದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಅನ್ ಎಯ್ಡೆಡ್ ಟೀಚರ್ಸ್ ಆಂಡ್ ಎಂಪ್ಲೋಯೀಸ್ ಯೂನಿಯನ್ (ಸಿಐ ಟಿಯು) ರಾಜ್ಯ ಅಧ್ಯಕ್ಷರು ಹಾಗೂ ಇತರ ಹಲವು ಸಂಘಟನೆಗಳಲ್ಲಿಯೂ ಇವರು ಈ ಹಿಂದೆ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.