ಸಿಪಿಎಂ ನೇತಾರ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ಕೊಡಕ್ಕಾಡ್ ನಲ್ಲಿ ಸಿಪಿಎಂ ನೇತಾರನೋರ್ವ ಮನೆಯೊಳಗೆ ನೇಣು ಬಿಗಿದು ಸಾವಿ ಗೀಡಾದ ಸ್ಥಿತಿಯಲ್ಲ್ಲಿ ಪತ್ತೆಯಾಗಿದ್ದಾರೆ.
ವೆಳ್ಳಚ್ಚಾಲ್ ಟೌನ್ ಬ್ರಾಂಚ್ ಸೆಕ್ರೆಟರಿ ಪುನ್ಯಕೋಡನ್ ಚಂದ್ರನ್ (55) ಎಂಬವರು ಮೃತಪಟ್ಟ ವ್ಯಕ್ತಿ. ಇಂದು ಬೆಳಿಗ್ಗೆ ಮನೆಯ ಏಣಿ ಮೆಟ್ಟಿಲಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಇವರು ಪತ್ತೆಯಾಗಿದ್ದಾರೆ. ವಿಷಯ ತಿಳಿದು ಚೀಮೇನಿ ಪೊಲೀಸರು ತಲುಪಿ ಮಹಜರು ನಡೆಸಿದ ಬಳಿಕ ಮೃತದೇಹವನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಡೊಯ್ಯಲಾಯಿತು. ಈ ಹಿಂದೆ ಗಲ್ಫ್‌ನಲ್ಲಿದ್ದ ಚಂದ್ರನ್ ವೆಳ್ಳಚ್ಚಾಲ್ ಪೇಟೆಯಲ್ಲ್ಲಿ ಅಂಗಡಿ ನಡೆಸುತ್ತಿದ್ದರು. ಆರ್ಥಿಕ ಸಂದಿಗ್ಧತೆಯೇ ಆತ್ಮಹತ್ಯೆಗೆ ಕಾರಣವೆಂದು ಸಂಶಯಿಸಲಾಗಿದೆ. ನಾಟಕ ಕಲಾವಿದನಾಗಿಯೂ ಚಂದ್ರನ್ ಗುರುತಿಸಿಕೊಂಡಿದ್ದರು.