ಸಿಪಿಎಂ ಸಮ್ಮೇಳನ: ವಾಲಿಬಾಲ್ ಪಂದ್ಯಾಟ
ಪೈವಳಿಕೆ : ಸಿಪಿಎಂ ಮಂಜೇಶ್ವರ ಏರಿಯಾ ಸಮ್ಮೇಳನದಂಗವಾಗಿ ಕುಡಾಲ್ ಮೇರ್ಕಳ ಲೋಕಲ್ ಸಮಿತಿಯ ನೆÀÃತೃತ್ವದಲ್ಲಿ ಸುಬ್ಬಯ್ಯಕಟ್ಟೆಯಲ್ಲಿ ವಾಲಿಬಾಲ್ ಪಂದ್ಯಾಟ ನಡೆಯಿತು. ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ, ಪುತ್ತಿಗೆ ಪಂಚಾಯತ್ ಅಧ್ಯಕ್ಷ ಡಿ. ಸುಬ್ಬಣ್ಣ ಆಳ್ವ ಉದ್ಘಾಟಿಸಿದರು. ಸ್ವಾಗತ ಸಮಿತಿ ಕನ್ವಿನರ್ ಸಿದ್ದೀಖ್ ಅಧ್ಯಕ್ಷತೆ ವಹಿಸಿದ್ದರು. ಅಶೋಕ ಭಂಡಾರಿ, ಬಿ. ಎ ಖಾದರ್, ಅಬ್ಬಾಸ್ ಮುನ್ನೂರು, ಇಸ್ಮಾಯಿಲ್ ಕುಂಡಲA, ಲತೀಫ್. ಬಿ. ಎ ಮತ್ತಿತರರು ಮಾತನಾಡಿದರು. ಸ್ವಾಗತ ಸಮಿತಿ ಅಧ್ಯಕ್ಷ ಬಿ. ಎ ಬಷೀರ್ ಸ್ವಾಗತಿಸಿದರು. ಶ್ರೀ ದುರ್ಗಾ ಪರಮೇಶ್ವರಿ ಕ್ಲಬ್ ಪೆರ್ಮುದೆ ಪ್ರಥಮ ಸ್ಥಾನ ಪಡೆದರು. ಸ್ವಾಗತ ಸಮಿತಿ ಪದಾಧಿಕಾರಿಗಳು ಬಹುಮಾನ ವಿತರಣೆ ನಡೆಸಿದರು.