ಸಿಪಿಎಂ ಹಿರಿಯ ಮುಖಂಡ ಪಿ. ಅಂಬಾಡಿ ನಿಧನ
ಕಾಸರಗೋಡು: ಜಿಲ್ಲೆಯ ಹಿರಿಯ ಸಿಪಿಎಂ ಮುಖಂಡ ಪಿ. ಅಂಬಾಡಿ (96) ನಿಧನ ಹೊಂದಿದರು. ಅಸೌಖ್ಯ ಹಿನ್ನೆಲೆಯಲ್ಲಿ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದ ಇವರು ಇಂದು ಮುಂಜಾನೆ ನಿಧನ ಹೊಂದಿದ್ದಾರೆ. ಸಂಜೆ 4 ಗಂಟೆಗೆ ಚಾತಮತ್ ಸಾರ್ವಜನಿಕ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ. ಇವರ ಪತ್ನಿ ನಾರಾಯಣಿ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ವಸಂತ, ಶಾಂತ, ತಂಗಮಣಿ, ರವೀಂದ್ರನ್, ಪ್ರಮೀಳ, ಪ್ರಮೋದ್ ಅಳಿಯಂದಿರಾದ ಕೆ. ಭಾಸ್ಕರನ್, ರಾಮಚಂದ್ರನ್, ಕರುಣಾಕರನ್, ಸೊಸೆ ವಿಜಯಶ್ರೀ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವೆ ಸೊಸೆ ಸಿತಾರ ಈ ಹಿಂದೆ ನಿಧನ ಹೊಂದಿದ್ದಾರೆ.