ಸೀತಾಂಗೋಳಿ ನಿವಾಸಿಯನ್ನು ಗಲ್ಫ್‌ನಿಂದ ಊರಿಗೆ ಕರೆಸಿ ಕೊಲೆಗೈದ ಪ್ರಕರಣ: ಇನ್ನೋರ್ವ ಮುಖ್ಯ ಆರೋಪಿ ಬಂಧನ
ಕಾಸರಗೋಡು: ಗಲ್ಪ್ ಉದ್ಯೋಗಿ ಯಾದ ಯುವಕನನ್ನು ಅಪಹರಿಸಿ ಗಂಭೀರ ಹಲ್ಲೆಗೊಳಿಸಿ ಕೊಲೆಗೈದ ಬಳಿಕ ಮೃತದೇಹವನ್ನು ಕಾರಿನಲ್ಲಿ ಕೊಂ ಡೊಯ್ದು ಖಾಸಗಿ ಆಸ್ಪತ್ರೆಯಲ್ಲಿ ಉಪೇಕ್ಷಿಸಿದ ಪ್ರಕರಣದಲ್ಲಿ ಇನ್ನೋರ್ವ ಆರೋಪಿಯನ್ನು ಬಂಧಿಸಲಾಗಿದೆ. ನಾಡನ್ನು ನಡುಗಿಸಿದ ಈ ಪ್ರಕರಣದ 10ನೇ ಆರೋಪಿಯಾದ ಮಂಜೇಶ್ವರ ಆಚೆಕೆರೆಯ ಅಶರ್ ಅಲಿ (27) ಎಂಬಾ ತನನ್ನು ಕಾಸರಗೋಡು ಕ್ರೈಂಬ್ರಾಂಚ್ ಡಿವೈಎಸ್ಪಿ ಪಿ. ಮಧುಸೂದನನ್ ನಾಯರ್ ಹಾಗೂ ತಂಡ ಬಂಧಿಸಿದೆ. ಗಲ್ಫ್ ನಿಂದ ಊರಿಗೆ ಮರಳುತ್ತಿದ್ದ ವೇಳೆ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಈತ ನನ್ನು ಬಂಧಿಸಲಾಗಿದೆ. ಕಾಸರಗೋಡಿಗೆ ತಲುಪಿಸಿದ ಆರೋಪಿಯನ್ನು ಸಮಗ್ರ ವಾಗಿ ತನಿಖೆಗೊಳಪಡಿಸಿದ ಬಳಿಕ ಅಧಿಕೃತವಾಗಿ ಬಂಧನ ದಾಖಲಿಸಿ ನ್ಯಾಯಾಲಯದಲ್ಲಿ ಹಾಜರುಪಡಿ ಸಲಾಗುವುದು.
2022 ಜೂನ್ 26ರಂದು ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಸೀತಾಂಗೋಳಿ ಮುಗುರೋ ಡ್‌ನ ಅಬೂಬಕರ್ ಸಿದ್ದಿಕ್ ಕೊಲೆಗೀ ಡಾದ ವ್ಯಕ್ತಿಯಾಗಿದ್ದಾರೆ. ಗಲ್ಫ್‌ನಲ್ಲಿರುವ ಓರ್ವನಿಗೆ ಹಸ್ತಾಂತರಿಸಲೆಂದು ನೀಡಲಾದ 30 ಲಕ್ಷ ರೂಪಾಯಿಗೆ ಸಂಬಂಧಿಸಿದ ತರ್ಕವೇ ಕೊಲೆಕೃತ್ಯದಲ್ಲಿ ಕೊನೆಗೊಂಡಿದೆ ಯೆಂದು ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸ ಲಾಗಿದೆ. ಮೊದಲು ಅಬೂಬಕರ್ ಸಿದ್ದಿಕ್‌ರ ಸಹೋದರ ಹಾಗೂ ಸ್ನೇಹಿ ತನನ್ನು ಕೊಟೇಶನ್ ತಂಡ ಅಪಹರಿಸಿ ಕೊಂಡೊಯ್ದು ಜನವಾಸವಿಲ್ಲದ ಸ್ಥಳ ದಲ್ಲಿ ಕೂಡಿ ಹಾಕಿದ ಬಳಿಕ ಗಂಭೀರ ವಾಗಿ ಹಲ್ಲೆಗೈಯ್ಯಲಾಗಿತ್ತು. ಆದರೆ ಆರ್ಥಿಕ ವ್ಯವಹಾರ ತರ್ಕಕ್ಕೆ ಪರಿಹಾರ ಉಂಟಾಗಿಲ್ಲ. ಈ ಹಿನ್ನೆಲೆಯಲ್ಲಿ ಗಲ್ಫ್ ನಲ್ಲಿದ್ದ ಅಬೂಬಕರ್ ಸಿದ್ದಿಕ್‌ರನ್ನು ಊರಿಗೆ ಕರೆಸಿದ ಬಳಿಕ ಅವರನ್ನು ಕಾರಿನಲ್ಲಿ ಅಪಹರಿಸಿ ಕೊಂಡೊಯ್ದು ಪೈವಳಿಕೆಯ ಜನವಾಸವಿಲ್ಲದ ಎರ ಡಂತಸ್ಥಿನ ಮನೆಗೆ ತಲುಪಿಸಲಾಯಿತು. ಅಲ್ಲಿ ಅವರನ್ನು ತಲೆಕೆಳಗಾಗಿಸಿ ನೇತು ಹಾಕಿದ ಬಳಿಕ ಗಂಭೀರವಾಗಿ ಹಲ್ಲೆಗೈದ ಪರಿಣಾಮವಾಗಿ ಸಾವು ಸಂಭವಿಸಿತ್ತು. ಅನಂತರ ಕೊಟೇಶನ್ ತಂಡ ಅಬೂಬ ಕರ್ ಸಿದ್ದಿಕ್‌ರ ಮೃತದೇಹವನ್ನು ಕಾರಿ ನಲ್ಲಿ ಕೊಂಡೊಯ್ದು ಬಂದ್ಯೋಡಿನ ಖಾಸಗಿ ಆಸ್ಪತ್ರೆಗೆ ತಲುಪಿಸಿ ಪರಾರಿ ಯಾಗಿತ್ತು. ಈ ಪ್ರಕರಣದಲ್ಲಿ 19 ಮಂದಿ ಆರೋಪಿಗಳಿದ್ದಾರೆ. ಇವರಲ್ಲ್ಲಿ 13 ಮಂದಿಯನ್ನು ಈ ಹಿಂದೆ ಬಂಧಿಸ ಲಾಗಿದೆ. ಇನ್ನು ಕೊಲೆಕೃತ್ಯದಲ್ಲಿ ನೇರವಾಗಿ ಭಾಗಿಯಾದವರ ಸಹಿತ ಐದು ಮಂದಿ ತಲೆಮರೆಸಿಕೊಂ ಡಿದ್ದಾರೆ. ಅಬೂಬಕರ್ ಸಿದ್ದಿಕ್‌ರ ಕೊಲೆ ಕೃತ್ಯದ ಹಿಂದೆ ಇನ್ನಷ್ಟು ಆರೋಪಿಗಳು ಇದ್ದಾರೆಂದು ತಿಳಿಸಿ ತಾಯಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣವನ್ನು ಕ್ರೈಂಬ್ರಾಂಚ್‌ಗೆ ಹಸ್ತಾಂ ತರಿಸಲಾಗಿತ್ತು. ಡಿವೈಎಸ್ಪಿ ನೇತೃತ್ವದಲ್ಲಿ ನಡೆಸಿದ ತನಿಖೆಯಲ್ಲಿ ಕೊಲೆಕೃತ್ಯಕ್ಕೆ ಉಪಯೋಗಿಸಿದ ಎರಡು ಕಾರುಗಳನ್ನು ವಶಪಡಿಸಲಾಗಿತ್ತು. ಕೊಲೆ ನಡೆದ ದಿನದಂ ದೇ ಗಲ್ಫ್‌ಗೆ ಪರಾರಿಯಾದ ಅಶರ್ ಅಲಿಯನ್ನು ಸೆರೆಹಿಡಿಯಲು ಕ್ರೈಂಬ್ರಾಂಚ್ ಲುಕೌಟ್ ನೋಟೀಸು ಹೊರಡಿಸಿತ್ತು. ಇತರ ಆರೋಪಿ ಗಳನ್ನು ಪತ್ತೆಹಚ್ಚಲಿರುವ ಕ್ರಮವನ್ನು ಕ್ರೈಂಬ್ರಾಂಚ್ ತ್ವರಿತಗೊಳಿಸಿದೆ.