ಸೀಮೆ ಎಣ್ಣೆ ಬೆಲೆ ಲೀಟರ್‌ಗೆ 4 ರೂ. ಹೆಚ್ಚಳ

ಕಾಸರಗೋಡು: ರಾಜ್ಯದಲ್ಲಿ ರೇಶನ್ ಸೀಮೆ ಎಣ್ಣೆ ಬೆಲೆಯಲ್ಲಿ ಲೀಟರ್‌ಗೆ 4 ರೂ. ಹೆಚ್ಚಿಸಲಾಗಿದೆ. ಪ್ರಸ್ತುತ ಲೀಟರ್‌ಗೆ 61 ರೂಪಾಯಿ ಆಗಿದ್ದು, ಅದನ್ನು  65 ರೂ.ಗೇರಲಿದೆ. ಬೆಲೆಯೇರಿಕೆಯನ್ನು ಆಹಾರ ಸಾರ್ವಜನಿಕ ವಿತರಣೆ ಇಲಾಖೆ ಶೀಘ್ರ ಜ್ಯಾರಿಗೆ ತರಲಿದೆ.  ಬೆಲೆ ಹೆಚ್ಚಿಸುವಾಗ  ಹೆಚ್ಚುವರಿಯಾಗಿ ಲಭಿಸುವ ಮೊತ್ತ ಕೇಂದ್ರ, ರಾಜ್ಯ ಸರಕಾರಗಳಿಗೆ ಲಭಿಸಲಿದೆ. ಇದೇ ವೇಳೆ ರಾಜ್ಯದಲ್ಲಿ ರೇಶನ್ ಅಂಗಡಿಗಳಲ್ಲಿ  ಸೀಮೆ ಎಣ್ಣೆ ವಿತರಣೆ ಮಂದಗತಿಯಲ್ಲಿದೆ. ಕೇಂದ್ರ ಮಂಜೂರು ಮಾಡಿದ 56.76 ಲಕ್ಷ ಲೀಟರ್ ಸೀಮೆ ಎಣ್ಣೆಯಲ್ಲಿ 20 ಶೇ. ಮಾತ್ರಕೇರಳ ಇದುವರೆಗೆ ಪಡೆದುಕೊಂಡಿದೆ. ಜೂನ್ ೩೦ರ ಮುಂಚಿನ ಸೀಮೆ ಎಣ್ಣೆ ಪಡೆದುಕೊಳ್ಳುವಂತೆ ಕೇಂದ್ರ ಸರಕಾರ ನಿರ್ದೇಶಿಸಿತ್ತು.

You cannot copy contents of this page