ಸುಪ್ರಿಂಕೋರ್ಟ್‌ನ ಹಿರಿಯ ನ್ಯಾಯವಾದಿ ಫಾಲಿ ಎಸ್ ನರಿಮಾನ್ ನಿಧನ
ದೆಹಲಿ: ಸುಪ್ರಿಂಕೋರ್ಟ್‌ನ ಹಿರಿಯ ನ್ಯಾಯವಾದಿ ಸಂವಿಧಾನ ತಜ್ಞ ಫಾಲಿ ಎಸ್. ನರಿಮಾನ್ (೯೫) ನಿಧನ ಹೊಂದಿದರು. ನಿನ್ನೆ ರಾತ್ರಿ ದೆಹಲಿಯಲ್ಲಿ ನಿಧನ ಸಂಭವಿಸಿದೆ. ೧೯೭೧ರಿಂದ ಸುಪ್ರೀಂ ಕೋರ್ಟ್ ನ್ಯಾಯವಾದಿಯಾಗಿ ದ್ದಾರೆ. ೧೯೭೨-೭೫ರಲ್ಲಿ ಅಡೀನಲ್ ಸೋಲಿಸಿಟರ್ ಜನರಲ್ ಆಗಿದ್ದರು. ೧೯೯೧ರಲ್ಲಿ ಪದ್ಮಭೂಷಣ, ೨೦೦೭ರಲ್ಲಿ ಪದ್ಮವಿಭೂಷಣ ನೀಡಿ ದೇಶ ಗೌರವಿಸಿತ್ತು. ೧೯೯೯-೨೦೦೫ರವರೆಗೆ ರಾಜ್ಯಸಭಾ ಸದಸ್ಯ ರಾಗಿದ್ದರು. ಕೇರಳದ ವಿವಿಧ ಕಾನೂನುಗಳ ಬಗ್ಗೆ ನರಿಮಾನ್ ರಿಂದ ಸಲಹೆ ಕೇಳಲಾಗಿತ್ತು.