ಕಾಸರಗೋಡು: ಕಾಸರಗೋಡು ನಗರದ ಪ್ರಮುಖ ಜ್ಯುವೆಲ್ಲರಿಯೊಂ ದರ ತಾತ್ಕಾಲಿಕ ಸೆಕ್ಯುರಿಟಿ ನೌಕರ ಕರ್ತವ್ಯ ವೇಳೆ ಕುಸಿದು ಬಿದ್ದು ಮೃತಪಟ್ಟರು.
ಕುಂಬಳೆ ಕುಂಟಂಗೇರಡ್ಕದ ಕೆ. ಹಮ್ದಾನ್ (60) ಮೃತಪಟ್ಟ ವ್ಯಕ್ತಿ. ಮೊನ್ನೆ ರಾತ್ರಿ ಘಟನೆ ನಡೆದಿದೆ. ಹಮ್ದಾನ್ ಬಿದ್ದ ಸ್ಥಿತಿಯಲ್ಲಿ ಕಂಡುಬಂದಿದ್ದು, ಈಬಗ್ಗೆ ಬೇರೊಬ್ಬ ಸೆಕ್ಯುರಿಟಿ ನೌಕರ ಸೆಕ್ಯೂರಿಟಿ ಏಜೆನ್ಸಿ ಅಧಿಕಾರಗಳಿಗೆ ತಿಳಿಸಿದ್ದರು. ಬಳಿಕ ಏಜೆನ್ಸಿ ಅಧಿಕಾರಿಗಳು ತಿಳಿಸಿದ ಹಿನ್ನೆಲೆಯಲ್ಲಿ ಅಗ್ನಿಶಾಮಕದಳ ತಲುಪಿ ಹಮ್ದಾನ್‌ರನ್ನು ಜನರಲ್ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.
ಮೃತರು ಪತ್ನಿ ಸುಹರಾ, ಮಕ್ಕಳಾದ ಮುಹಮ್ಮದ್ ಅನಸ್, ನೂರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.