ಸೇತುವೆಯಿಂದ ಹೊಳೆಗೆ ಹಾರಿದ ಯುವಕನ ಮೃತದೇಹ ಪತ್ತೆ
ಕಾಸರಗೋಡು: ಚಂದ್ರಗಿರಿ ಹೊಳೆಗೆ ನಿನ್ನೆ ಹಾರಿ ನಾಪತ್ತೆಯಾದ ಯುವಕನ ಮೃತದೇಹ ಹೊಳೆ ಸಮೀಪ ಇಂದು ಬೆಳಿಗ್ಗೆ ಪತ್ತೆಯಾಗಿದೆ. ಅಗ್ನಿಶಾಮಕದಳ, ಪೊಲೀಸರು ಮತ್ತು ಊರವರು ಸೇರಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಇವರ ಮೃತದೇಹ ಪತ್ತೆಯಾಗಿದೆ. ಚೆಂಗಳ ಪಡಿಞ್ಞಾರ್ ಮೂಲೆ ಭಾಪಕಿ ನಗರದ ಕಣ್ಣರಂ ಮುಹಮ್ಮದ್ ಎಂಬ ವರ ಪುತ್ರ ಕೆ.ಎಂ.ಶೆರೀಫ್ (45) ಸಾವ ನ್ನಪ್ಪಿದ ಯುವಕ. ಇವರು ನಿನ್ನೆ ಬೆಳಿಗ್ಗಿ ನಿಂದ ಮನೆಯಿಂದ ನಾಪತ್ತೆಯಾಗಿದ್ದರು. ಅವರಿಗಾಗಿ ಮನೆಯವರು ಹುಡು ಕಾಟದಲ್ಲಿ ತೊಡಗಿದಾಗ ಪೆರುಂಬಳ ಸೇತುವೆ ಬಳಿ ಅವರು ಪ್ರಯಾಣಿಸಿದ್ದ ಸ್ಕೂಟರ್ ಮತ್ತು ಚಪ್ಪಲಿ ಪತ್ತೆಯಾಗಿದೆ. ಇದರಿಂದಾಗಿ ಅವರು ಪೆರುಂಬಳ ಸೇತುವೆಯಿಂದ ಚಂದ್ರಗಿರಿ ಹೊಳೆಗೆ ಹಾರಿರಬಹು ದೆಂಬ ಶಂಕೆ ಉಂಟಾಗಿತ್ತು. ಆ ಬಗ್ಗೆ ನೀಡಲಾದ ದೂರಿನಂತೆ ಕಾಸರ ಗೋಡು ಸ್ಟೇಶನ್ ಆಫೀಸರ್ ಆರ್. ಹರ್ಷರ ನೇತೃತ್ವದ ಕಾಸರಗೋಡು ಅಗ್ನಿಶಾಮಕದಳ ಸ್ಕ್ಯೂಬಾ ಉಪಯೋ ಗಿಸಿ ನಿನ್ನೆ ಗಂಟೆಗಳ ತನಕ ಹೊಳೆಯಲ್ಲಿ ಶೋಧ ನಡೆಸಿದರೂ ಶೆರೀಫ್‌ರನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ವಿದ್ಯಾನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು. ಶೆರೀಫ್ ನಾಪತ್ತೆಯಾದ ಬಗ್ಗೆ ವಿದ್ಯಾನಗರ ಪೊಲೀಸರು ಮಿಸ್ಸಿಂಗ್ ಪ್ರಕರಣ ದಾಖಲಿಸಿಕೊಂಡಿದ್ದರು.
ಮೃತರು ತಾಯಿ ರುಖಿಯಾ, ಪತ್ನಿ ಸುಹರಾ, ಮಕ್ಕಳಾದ ಸನಾಫಾತಿಮ, ಜುನೈದ್, ಫಾತಿಮ, ಇಜಾಸ್, ಸಹೋದರ-ಸಹೋದರಿಯರಾದ ಅಶ್ರಫ್, ಸಲಾಂ, ಲತೀಫ್, ಮೊಯ್ದೀನ್, ಸಂಶೀರ್, ಸುಹರಾ, ರಾಬಿಯಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.