ಸೇಲ್ಸ್‌ಗರ್ಲ್‌ಳನ್ನು ವಿವಿಧೆಡೆ ಕರೆದೊಯ್ದು ಕಿರುಕುಳ: ಸೇಲ್ಸ್‌ಮೆನ್ ಕಸ್ಟಡಿಗೆ

ಕಾಸರಗೋಡು: ಸೇಲ್ಸ್ ಗರ್ಲ್ ಆಗಿದ್ದ ಯುವತಿಯನ್ನು ಯುವಕ ವಿವಿ ಧೆಡೆಗೆ ಕರೆದೊಯ್ದು ಕಿರುಕುಳ ನೀಡಿ ರುವುದಾಗಿ ದೂರಲಾಗಿದೆ. ಈ ಬಗ್ಗೆ ಯುವತಿ ನೀಡಿದ ದೂರಿನಂತೆ ದೌರ್ಜ ನ್ಯ ಕೇಸು ದಾಖಲಿಸಿಕೊಂಡ ಕಾಸರ ಗೋಡು ನಗರ ಠಾಣೆ  ಪೊಲೀಸರು ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಸೀತಾಂಗೋಳಿ ನಿವಾಸಿಯಾದ ಶರತ್ (27) ಎಂಬಾತ ಕಸ್ಟಡಿಯ ಲ್ಲಿರುವ ವ್ಯಕ್ತಿಯೆಂದು ಪೊಲೀಸರು ತಿಳಿಸಿದ್ದಾರೆ. ಕಾಸರಗೋಡಿನ ವ್ಯಾಪಾರ ಸಂಸ್ಥೆಯಲ್ಲಿ ಶರತ್ ಸೇಲ್ಸ್‌ಮೆನ್ ಆಗಿದ್ದಾನೆ. ನಗರದಲ್ಲಿ ಈತನಿಗೆ 25ರ ಹರೆಯದ ಯುವತಿಯ ಪರಿಚಯವಾಗಿತ್ತು. ಅನಂತರ ಅವರು ಪ್ರೇಮದಲ್ಲಿದ್ದರೆನ್ನ ಲಾಗಿದೆ.  ಬಳಿಕ ಮದುವೆಯಾ ಗುವುದಾಗಿ ಭರವಸೆ ಯೊಡ್ಡಿ ಯುವತಿಯನ್ನು ವಿವಿಧ ಸ್ಥಳಗಳಿಗೆ ಕರೆದೊಯ್ದು ಕಿರುಕುಳ ನೀಡಿರುವುದಾಗಿ ದೂರಲಾಗಿದೆ. ಆದರೆ ಮದುವೆಯಾಗುವುದಾಗಿ ನೀಡಿದ ಭರವಸೆಯಿಂದ ಹಿಂಜರಿದ ಹಿನ್ನೆಲೆಯಲ್ಲಿ ಯುವತಿ ಪೊಲೀಸರಿಗೆ ದೂರು ನೀಡಿದ್ದಳು.

You cannot copy contents of this page