ಕಾಸರಗೋಡು: ಕಳೆದ ಮೂರು ವರ್ಷಗಳಲ್ಲಾಗಿ ಸೈಬರ್ ವಂಚನೆ ಮೂಲಕ ಕೇರಳದಿಂದ 1012 ಕೋಟಿ ರೂ.ವನ್ನು ಸೈಬರ್ ವಂಚಕರು ಲಪಟಾಯಿಸಿದ್ದಾರೆ. ಕಳೆದ ವರ್ಷ ರಾಜ್ಯದಲ್ಲಿ ಅತೀ ಹೆಚ್ಚು ಎಂಬAತೆ ಎರ್ನಾಕುಳಂ ಜಿಲ್ಲೆಯಲ್ಲಿ ಮಾತ್ರವಾಗಿ ಇಂತಹ ವಂಚಕರು 174 ಕೋಟಿ ರೂ. ಲಪಟಾಯಿಸಿದ್ದಾರೆ. ತಿರುವನಂತಪುರ ಜಿಲ್ಲೆಯಲ್ಲಿ 114.9 ಕೋಟಿ ರೂಪಾಯಿಯನ್ನು ಲಪಟಾಯಿಸಲಾಗಿದೆ. ರಾಜ್ಯದಲ್ಲಿ ಅತೀ ಕಡಿಮೆ ಎಂಬAತೆ ವಯನಾಡಿನಲ್ಲಿ 9 ಕೋಟಿ ರೂ. ಲಪಟಾಯಿಸಲಾಗಿದೆ.
ಸೈಬರ್ ವಂಚನೆ ಮೂಲಕ ನಷ್ಟಗೊಂಡ ಹಣದಲ್ಲಿ 2022ರಲ್ಲಿ 4.38 ಕೋಟಿ ರೂ. ಹಾಗೂ 2023ರಲ್ಲಿ 37.16 ಕೋಟಿ ರೂ.ವನ್ನು ರಾಜ್ಯ ಸೈಬರ್ ಸೆಲ್ ಪೊಲೀಸರ ಸಕಾಲಿಕ ಕಾರ್ಯಾಚರಣೆಯಿಂದ ಹಿಂತಿರುಗಿ ಪಡೆಯಲು ಸಾಧ್ಯವಾಗಿದೆ.
ಭಾರೀ ಆದಾಯದ ಆನ್ಲೈನ್ ವ್ಯಾಪಾರ, ಹಣ ಇಮ್ಮಡಿಗೊಳಿಸುವಿಕೆ, ವಿದೇಶ ಉದ್ಯೋಗ, ವಾಹನ ಖರೀದಿ, ಠೇವಣಿ ಹೂಡಿದಲ್ಲಿ ಅದಕ್ಕೆ ಭಾರೀ ಬಡ್ಡಿ ನೀಡುವ ಇತ್ಯಾದಿ ಆಮಿಷಗಳನ್ನು ಒಡ್ಡಿ ಸೈಬರ್ ವಂಚಕರು ಅಮಾಯಕರಿಂದ ಆನ್ಲೈನ್ ಮೂಲಕ ಹಣ ಪಡೆದು ಬಳಿಕ ವಂಚಿಸುತ್ತಿರುವ ಜಾಲ ರಾಜ್ಯದಲ್ಲಿ ಇತ್ತೀಚೆಗಿನ ದಿನದಿಂದ ಅನಿಯಂತ್ರಿತವಾಗಿ ಕಾರ್ಯವೆಸಗುತ್ತಿದೆ. ಈ ಬಗ್ಗೆ ಸೈಬರ್ ಸೆಲ್ ಪೊಲೀಸರು ಜನರಲ್ಲಿ ಪದೇ ಪದೇ ಅರಿವು ಮೂಡಿಸುವ ಅಭಿಯಾನವನ್ನು ನಡೆಸುತ್ತಿದ್ದು, ಇಂತಹ ಸೈಬರ್ ವಂಚನೆಗಳ ಬಗ್ಗೆ ತಕ್ಷಣ ಸೈಬರ್ ಸೆಲ್ಗೆ ದೂರು ನೀಡಿದಲ್ಲಿ ಹಣ ನಷ್ಟಗೊಳ್ಳುವಿಕೆಯನ್ನು ತಪ್ಪಿಸಬಹುದೆಂಬ ಅರಿವನ್ನು ಜನರಿಗೆ ನೀಡುತ್ತಿದ್ದಾರೆ. ಹೀಗೆ ಸಕಾಲದಲ್ಲಿ ನೀಡಲಾದ ದೂರಿನಂತೆ ಸೈಬರ್ ಸೆಲ್ ಪೊಲೀಸರು ತಕ್ಷಣ ನಡೆಸಿದ ಕಾರ್ಯಾಚರಣೆಯಲ್ಲಿ 2024ರಲ್ಲಿ ಸೈಬರ್ ವಂಚನೆಯಿAದ ನಷ್ಟಗೊಂಡ ಮೊತ್ತದಲ್ಲಿ 149 ಕೋಟಿ ರೂ.ವನ್ನು ಹಿಂಪಡೆಯುವಲ್ಲಿ ಸಫಲವಾಗಿದ್ದಾರೆ. ಹೀಗೆ ಸೈಬರ್ ವಂಚನೆ ಬಗ್ಗೆ ಕಳೆದ ವರ್ಷ ರಾಜ್ಯದಲ್ಲಿ ಒಟ್ಟಾರೆಯಾಗಿ 41,426 ದೂರುಗಳು ಸೈಬರ್ ಸೆಲ್ ಪೊಲೀಸರಿಗೆ ಲಭಿಸಿದೆ.
