ಸೊಳ್ಳೆಗಳನ್ನು ಓಡಿಸಲು ಬೆಂಕಿ ಹಚ್ಚುತ್ತಿದ್ದಾಗ ಸುಟ್ಟು ಗಾಯಗೊಂಡ ಗೃಹಿಣಿ ಮೃತ್ಯು
ಕಾಸರಗೋಡು: ಸೊಳ್ಳೆಗಳನ್ನು ಓಡಿಸಲು ಬೆಂಕಿ ಹಚ್ಚುತ್ತಿದ್ದ ವೇಳೆ ಗಂಭೀರ ಸುಟ್ಟು ಗಾಯಗೊಂಡು ಗೃಹಿಣಿ ಮೃತಪಟ್ಟ ಘಟನೆ ನಡೆದಿದೆ. ವೆಳ್ಳೆರಿಕುಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ಕೊನ್ನಕ್ಕಾಡ್ ಅಶೋಕಚ್ಚಾಲ್ ಕಯ್ಯುಕ್ಕಾರನ್ ಹೌಸ್‌ನ ಕುಂಬ (73) ಎಂಬವರು ಮೃತಪಟ್ಟ ದುರ್ದೈವಿ. ಡಿಸೆಂಬರ್ 21ರಂದು ಸಂಜೆ ಕುಂಬರ ದೇಹಕ್ಕೆ ಬೆಂಕಿ ತಗಲಿ ಗಂಭೀರ ಗಾಯಗೊಂಡಿದ್ದರು. ಸೊಳ್ಳೆಗಳನ್ನು ಓಡಿಸಲು ಮನೆಯಂಗಳ ಸಮೀಪ ತರಗೆಲೆಗಳನ್ನು ರಾಶಿ ಹಾಕಿ ಬೆಂಕಿ ಹಚ್ಚುತ್ತಿದ್ದಾಗ ಬಟ್ಟೆಗೆ ಬೆಂಕಿ ಹತ್ತಿಕೊಂಡು ಈ ದುರ್ಘಟನೆ ಉಂಟಾಗಿತ್ತು. ಗಂಭೀರ ಗಾಯಗೊಂಡ ಇವರನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಿನ್ನೆ ರಾತ್ರಿ ಸಾವು ಸಂಭವಿಸಿದೆ.