ಸೋಂಕಾಲಿನಲ್ಲಿ ನಿರಂತರ ಕುಡಿಯುವ ನೀರು ಪೋಲು: ದುರಸ್ತಿಗೆ ಒತ್ತಾಯ
ಉಪ್ಪಳ: ಪ್ರತಾಪನಗರದ ೭ನೇ ವಾರ್ಡ್ ಸೋಂಕಾಲಿನಲ್ಲಿ ಪೈಪ್ ಬಿರುಕು ಬಿಟ್ಟು ವ್ಯಾಪಕ ಕುಡಿ ನೀರು ಪೋಲಾಗುತ್ತಿದ್ದರೂ ದುರಸ್ತಿಗೆ ಕ್ರಮಕೈಗೊಳ್ಳದಿರುವುದರಿಂದ ಮುಂದೆ ನೀರಿನ ಕ್ಷಾಮ ತಲೆದೆÀÆÃರಲಿದೆ ಎಂದು ಊರವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸೋಂಕಾಲು ಬಸ್ ನಿಲ್ದಾಣ ಬಳಿಯಲ್ಲಿ ಹಲವಾರು ದಿನಗಳಿಂದ ಪೈಪ್ ಬಿರುಕುಬಿಟ್ಟಿದ್ದು, ಇದರಿಂದ ನೀರು ಪೋಲಾಗಿ ರಸ್ತೆ ಉದ್ದಕ್ಕೂ ಹರಿದು ಮಣ್ಣಿನ ರಸ್ತೆ ಕೆಸರು ಗದ್ದೆಯಾಗಿ ವಾಹನ ಸಂಚಾರ ಸಹಿತ ನಡೆದದಾಡಲು ಸಮಸ್ಯೆಯಾಗಿರು ವುದಾಗಿ ದೂರಲಾಗಿದೆ. ಈ ಬಗ್ಗೆ ಸ್ಥಳೀಯರು ಸಂಬAಧಪಟ್ಟವರ ಗಮನಕ್ಕೆ ತಂದರೂ ದುರಸ್ತಿಗೆ ಕ್ರಮಕೈಗೊಳ್ಳದಿರುವುದು ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಕೃಷ್ಣನಗರ ಸಹಿತ ವಿವಿಧ ಕಡೆಗಳಲ್ಲಿ ನೀರು ಪೋಲಾಗುತ್ತಿದೆ. ಇದರಿಂದ ಮುಂದೆ ನೀರಿನ ಕ್ಷಾಮ ಹೆಚ್ಚಾಗಲಿರುವುದಾಗಿ ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನೀರಾವರಿ ಇಲಾಖೆ ಅಧಿಕಾರಿಗಳು ಮುತುವರ್ಜಿವಹಿಸಿ ಅಲ್ಲಲ್ಲಿ ಬಿರುಕು ಬಿಟ್ಟು ನೀರು ಪೋಲಾಗುತ್ತಿರುವ ಬಗ್ಗೆ ತಪಾಸಣೆ ನಡೆಸಿ ಕೂಡಲೇ ದುರಸ್ತಿಗೆ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.