ಸ್ಕೂಟರ್ಗೆ ಕಾರು ಢಿಕ್ಕಿ: ಗಾಯಗೊಂಡ ಯುವಕ ಮೃತ್ಯು
ಕುಂಬಳೆ: ಸ್ಕೂಟರ್ಗೆ ಕಾರು ಢಿಕ್ಕಿ ಹೊಡೆದು ಗಂಭೀರ ಗಾಯ ಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಯಲ್ಲಿದ್ದ ಯುವಕ ಮೃತಪಟ್ಟರು. ಕುಂಬಳೆ ಮುಳಿಯಡ್ಕ ನಿವಾಸಿ ರಾಜು ಎಂಬವರ ಪುತ್ರ ಪ್ರಮೋದ್ (35) ಮೃತಪಟ್ಟ ದುರ್ದೈವಿ. ಮೊನ್ನೆ ಮಧ್ಯಾಹ್ನ ನಾಯ್ಕಾಪಿನಲ್ಲಿ ಅಪಘಾತ ಸಂಭವಿ ಸಿದೆ. ಪ್ರಮೋದ್ ಹಾಗೂ ಸ್ನೇಹಿತ ಸ್ಕೂಟರ್ನಲ್ಲಿ ಸಂಚರಿಸುತ್ತಿದ್ದ ವೇಳೆ ಕಾರು ಢಿಕ್ಕಿ ಹೊಡೆದಿತ್ತು. ಇದ ರಿಂದ ಸ್ಕೂಟರ್ನ ಹಿಂಬದಿಯಲ್ಲಿ ಕುಳಿತಿದ್ದ ಪ್ರಮೋದ್ ಗಂಭೀರ ಗಾಯಗೊಂ ಡಿದ್ದರು.
ಇವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಇಂದು ಬೆಳಿಗ್ಗೆ ಮೃತಪಟ್ಟರು. ಮೃತರು ತಂದೆ, ತಾಯಿ ಜಾನಕಿ, ಪತ್ನಿ ಸವಿತಾ, ಮಕ್ಕಳಾದ ವೈಷ್ಣವಿ, ಅರ್ಜುನ್, ಸಹೋದರ-ಸಹೋದರಿಯರಾದ ಪ್ರಮೀಳ, ಮಂಜುಳಾ, ಸವಿತಾ, ಸೌಮ್ಯ, ಸುಧಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.