ಸ್ಕೂಟರ್ನಲ್ಲಿ ಎಂಡಿಎಂಎ ಸಹಿತ ಯುವಕ ಸೆರೆ
ಕಾಸರಗೋಡು: ಸ್ಕೂಟರ್ನಲ್ಲಿ ಸಾಗಿಸುತ್ತಿದ್ದ ಎಂಡಿಎಂಎ ಸಹಿತ ಯುವಕ ಸೆರೆಗೀಡಾಗಿದ್ದಾನೆ. ಮುಳಿ ಯಾರು ಮಾಸ್ತಿಕುಂಡ್ ಚೂರಿ ಮೂಲೆಯ ಮುಹಮ್ಮದ್ ರಫೀಕ್ (35) ಎಂಬಾತನನ್ನು ಆದೂರು ಎಸ್ಐ ವಿನೋದ್ ಕುಮಾರ್ ನೇತೃತ್ವದಲ್ಲಿ ಬಂಧಿಸಲಾಗಿದೆ. ಇಂದು ಮುಂಜಾನೆ ಚೆರ್ಕಳ ಕೆಕೆಪುರದ ಖಾಸಗಿ ಆಸ್ಪತ್ರೆ ಸಮೀಪ ನಡೆಸಿದ ವಾಹನ ತಪಾಸಣೆ ವೇಳೆ 1.3 ಗ್ರಾಂ ಎಂಡಿಎಂಎ ಸಹಿತ ಯುವಕನನ್ನು ಸೆರೆಹಿಡಿಯಲಾಗಿದೆ. ಸ್ಕೂಟರ್ ಚೆರ್ಕಳ ಭಾಗದಿಂದ ಬೋವಿಕ್ಕಾನ ಭಾಗಕ್ಕೆ ಸಂಚರಿಸುತ್ತಿತ್ತು.