ಬದಿಯಡ್ಕ: ಬದಿಯಡ್ಕ ಅಬಕಾರಿ ರೇಂಜ್ ಕಚೇರಿಯ ಪ್ರಿವೆಂ ಟಿವ್ ಆಫೀಸರ್ ಮೊಹಮ್ಮದ್ ಕಬೀರ್ ಬಿ.ಎಸ್ ನೇತೃತ್ವದ ತಂಡ ಬಳಕಿಲದಲ್ಲಿ ನಿನ್ನೆ ನಡೆಸಿದ ದಾಳಿಯಲ್ಲಿ ಸ್ಕೂಟರೊಂದರಲ್ಲಿ ಸಾಗಿಸುತ್ತಿದ್ದ ೧೭.೨೮ ಲೀಟರ್ ಕರ್ನಾಟಕ ಮದ್ಯ (೧೮೦ ಎಂಎಲ್‌ನ ೯೬ ಪ್ಯಾಕೆಟ್) ಕರ್ನಾ ಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿದೆ. ಸ್ಕೂಟರನ್ನೂ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿ ಅಡೂರು ಕೋಲತ್ತಿಲ ವೀಟಿಲ್‌ನ ಬಾಲಕೃಷ್ಣ ಕೆ ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಈ ದಾಳಿ ಕಾರ್ಯಾಚರಣೆಯಲ್ಲಿ ಸಿಇಒಗಳಾದ ಮನೋಜ್ ಪಿ, ಮೋಹನ್ ಕುಮಾರ್ ಎಲ್, ಜನಾರ್ದನ, ಪ್ರಭಾಕರನ್, ಸದಾನಂದನ್, ಶಮ್ಯಾ ಮತ್ತು ಚಾಲಕ ರಾಧಾಕೃಷ್ಣನ್ ಎಂಬಿವರು ಒಳಗೊಂಡಿದ್ದರು.







