ಕಾಸರಗೋಡು: ನೀಲೇಶ್ವರ ಬಸ್ ನಿಲ್ದಾಣ ಸಮೀಪ ನಿಲ್ಲಿಸಿದ್ದ ಸ್ಕೂಟರ್ ಕಳವುಗೈದ ಯುವಕನನ್ನು ಗಂಟೆಗಳ ಅಂತರದಲ್ಲಿ ನೀಲೇಶ್ವರ ಪೊಲೀಸರು ಸೆರೆ ಹಿಡಿದಿದ್ದಾರೆ. ತೃಶೂರು ಚಿರನಲ್ಲೂರು ನಿವಾಸಿ ಅಬ್ದುಲ್ ಹಮೀದ್ನನ್ನು ವಡಗರ ಪೊಲೀಸರ ಸಹಾಯದೊಂದಿಗೆ ನೀಲೇಶ್ವರ ಪೊಲೀಸರು ಸೆರೆ ಹಿಡಿದಿ ದ್ದಾರೆ. ನಿನ್ನೆ ಮಧ್ಯಾಹ್ನ ನೀಲೇಶ್ವರ ಮಾರುಕಟ್ಟೆಯಲ್ಲಿ ಕದಲೀಪುಳದ ವಿಷ್ಣುಮನೋಹರ್ರ ಜ್ಯುಪೀಟರ್ ಸ್ಕೂಟರನ್ನು ಕವುಗೈಯ್ಯಲಾಗಿತ್ತು. ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಸಿಸಿ ಟಿವಿ ದೃಶ್ಯಗಳನ್ನು ಪರಿ ಶೀಲಿಸಿದಾಗ ಕಳ್ಳನ ಬಗ್ಗೆ ಕುರುಹು ಲಭಿಸಿದೆ.
ಬಳಿಕ ರಾಜ್ಯದ ಎಲ್ಲಾ ಠಾಣೆಗಳಿಗೂ ಮಾಹಿತಿ ಹಸ್ತಾಂತ ರಿಸಲಾಗಿದ್ದು, ವಾಹನ ತಪಾಸಣೆ ತೀವ್ರಗೊಳಿಸಲಾಯಿತು. ಆರೋಪಿ ಯನ್ನು ವಡಗರ ಪೊಲೀಸರ ಸಹಾಯದೊಂದಿಗೆ ಸೆರೆ ಹಿಡಿಯ ಲಾಗಿದ್ದು, ನೀಲೇಶ್ವರಕ್ಕೆ ಕರೆತರಲಾಗಿದೆ. ಇಂದು ನ್ಯಾಯಾಲಯಕ್ಕೆ ಹಾಜ ರುಪಡಿಸಲಾಗುವುದು.