ಸ್ಕೂಟರ್-ಕಾರು ಢಿಕ್ಕಿ: ಸ್ಕೂಟರ್ ಸವಾರನ ವಿರುದ್ಧ ಕೇಸು
ಮಂಜೇಶ್ವರ: ಕಾರಿಗೆ ಸ್ಕೂಟರ್ ಢಿಕ್ಕಿ ಹೊಡೆದ ಸಂಬಂಧ ಸ್ಕೂಟರ್ ಸವಾರನ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ಸೋಮೇಶ್ವರ ಮೇರಳಗುಡ್ಡೆ ನಿವಾಸಿ ಮೊಹಮ್ಮದ್ ಸಲೀಂ (37) ವಿರುದ್ಧ ಕೇಸು ದಾಖಲಿಸಲಾಗಿದೆ. ನಿನ್ನೆ ಸಂಜೆ ೪.೪೫ರ ವೇಳೆ ಕುಂಜತ್ತೂರು ಜಂಕ್ಷನ್‌ನಲ್ಲಿ ಅಪಘಾತ ಸಂಭವಿಸಿದೆ. ಮೊಹಮ್ಮದ್ ಸಲೀಂ ಚಲಾಯಿಸುತ್ತಿದ್ದ ಸ್ಕೂಟರ್ ರಿಟ್ಸ್ ಕಾರಿಗೆ ಢಿಕ್ಕಿ ಹೊq ದಿತ್ತು. ವಿಷಯ ತಿಳಿದು ಅಲ್ಲಿಗೆ ತಲುಪಿದ ಪೊಲೀಸರು ತಪಾಸಣೆ ನಡೆಸಿದಾಗ ಮೊಹಮ್ಮದ್ ಸಲೀಂ ಮದ್ಯದಮಲಿನಲ್ಲಿ ಸ್ಕೂಟರ್ ಚಲಾಯಿಸಿರುವುದಾಗಿ ತಿಳಿದು ಬಂದಿದೆಯೆಂದು ಪೊಲೀಸರು ತಿಳಿಸಿದ್ದಾರೆ.