ಸ್ಥಳೀಯಾಡಳಿತ ಚುನಾವಣೆ: ಮತಯಂತ್ರಗಳ ಪ್ರಥಮ ಹಂತದ ಪರಿಶೀಲನೆ ಆರಂಭ
ಕಾಸರಗೋಡು: ಸ್ಥಳೀಯಾಡಳಿತ ಚುನಾವಣೆಗಳಿ ಗಿರುವ ಮತ ಯಂತ್ರಗಳ ಪ್ರಥಮ ಹಂತದ ತಪಾಸಣೆ ಆರಂಭ ಗೊಂಡಿದೆ. ಮತದಾನಕ್ಕೆ 5970 ಬ್ಯಾಲೆಟ್ ಯೂನಿಟ್ಗಳು, 2110 ಕಂಟ್ರೋಲ್ ಯೂನಿಟ್ಗಳನ್ನು ಸಿದ್ಧಪಡಿಸಲಾಗುವುದು. ಕಲೆಕ್ಟ್ರೇಟ್ನ ಜಿಲ್ಲಾ ವೇರ್ ಹೌಸ್ ಸಮೀಪ ಸಿದ್ಧಪಡಿಸಿದ ಪ್ರತ್ಯೇಕ ಸಭಾಂಗಣದಲ್ಲಿ ತಪಾಸಣೆ ಆರಂಭಗೊಂಡಿದೆ. ಜಿಲ್ಲಾಧಿಕಾರಿ ಕೆ. ಇಂಬಶೇಖರ್, ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಇಲೆಕ್ಟ್ರೋನಿಕ್ ಮತ ಯಂತ್ರವನ್ನು ತೆರೆದು ಮೊದಲ ಹಂತದ ತಪಾಸಣೆ ನಡೆಸಲಾಯಿತು. 20 ತಂಡಗಳು ತಪಾಸಣೆ ನಡೆಸುತ್ತಿವೆ. ಎಡಿಎಂ ಪಿ. ಅಖಿಲ್, ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಎಂ. ಕುಂಞಂಬು ನಂಬ್ಯಾರ್, ಟಿಎಂಎ ಕರೀಂ, ಎಂ. ಶ್ರೀಧರ, ಉಮ್ಮರ್ ಪಾಡಲಡ್ಕ ಭಾಗವಹಿಸಿದರು. ಆಗಸ್ಟ್ ೨೦ರ ವರೆಗೆ ಪ್ರಥಮ ಹಂತದ ಪರಿಶೀಲನೆ ನಡೆಯಲಿದೆ.