ಕಾಸರಗೋಡು: ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ನೌಕರರ ಕ್ಷಾಮ ಎದುರಾಗಿದ್ದು, ಇದು ತೀವ್ರ ಸಮಸ್ಯೆಗೆ ಕಾರಣವಾಗಿರುವುದಾಗಿ ದೂರಲಾಗಿದೆ. ಗ್ರಾಮ ಪಂಚಾ ಯತ್, ಬ್ಲೋಕ್ ಪಂಚಾಯತ್ ಹಾಗೂ ನಗರಸಭೆಗಳಲ್ಲಾಗಿ 152 ಹುದ್ದೆಗಳು ಈಗ ಖಾಲಿಯಾಗಿ ಉಳಿದುಕೊಂಡಿದೆ. ಏಳು ಗ್ರಾಮ ಪಂಚಾಯತ್, ಎರಡು ಬ್ಲೋಕ್ ಪಂಚಾಯತ್ ಗಳಲ್ಲಿ ಸೆಕ್ರೆಟರಿಯ ಹುದ್ದೆ ಖಾಲಿ ಬಿದ್ದಿದೆ.
ಬೆಳ್ಳೂರು, ಎಣ್ಮಕಜೆ, ಮಧೂರು, ಪೈವಳಿಕೆ, ಚೆರುವತ್ತೂರು, ಈಸ್ಟ್ ಎಳೇರಿ, ಪನತ್ತಡಿ ಗ್ರಾಮ ಪಂಚಾಯತ್‌ಗಳು, ಕಾಸರಗೋಡು, ಮಂಜೇಶ್ವರ, ಬ್ಲೋಕ್ ಪಂಚಾಯತ್ ಗಳಲ್ಲಿ ಕಾರ್ಯದರ್ಶಿಗಳಿಲ್ಲ. ಅದೇ ರೀತಿ ಸೀನಿಯರ್ ಕ್ಲರ್ಕ್‌ಗಳ ಹುದ್ದೆಗೂ ನೇಮಕಾತಿ ನಡೆದಿಲ್ಲ. ವಿವಿಧ ಕಚೇರಿಗಳಲ್ಲಿ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್‌ಗಳ ಎರಡು ಹುದ್ದೆ, ಅಸಿಸ್ಟೆಂಟ್ ವಿ.ಇ.ಒ ಗ್ರೇಡ್ ಒಂದು 2 ಹುದ್ದೆ, ಗ್ರೇಡ್ ಎರಡು ಎgಡು ಹುದ್ದೆ, ಕ್ಲಾರ್ಕ್ 9, ಕನ್ನಡ ಭಾಷೆ ತಿಳಿದಿರುವ ಕ್ಲಾರ್ಕ್ 17 ಹುದ್ದೆ, ಓವರ್ ಸಿಯರ್ ಗ್ರೇಡ್ ಒಂದು-೫ ಹಾಗೂ ಚಾಲಕರ ಮೂರು ಹುದ್ದೆಗಳು ಖಾಲಿಯಿವೆ.
ಈ ರೀತಿ ನೌಕರರ ಕ್ಷಾಮ ವುಂ ಟಾಗಿರುವುದು ಸ್ಥಳೀಯಾ ಡಳಿತ ಸಂಸ್ಥೆಗಳ ದೈನಂದಿನ ಚಟುವಟಿಕೆ ಮೇಲೆ ತೀವ್ರ ಪರಿಣಾಮ ಬೀರಿದೆ. ಜನಸಾಮಾ ನ್ಯರು ವಿವಿಧ ಅಗತ್ಯಗಳಿಗೆ ಪಂಚಾಯತ್, ಕಚೇರಿಗಳಿಗೆ ತಲುಪಿದಾಗ ಅವರಿಗೆ ಸರಿಯಾದ ಸೇವೆ ಲಭಿಸುತ್ತಿಲ್ಲವೆಂಬ ಆರೋ ಪವೂ ಉಂಟಾಗಿದೆ. ಈ ಹಣ ಕಾಸು ವರ್ಷ ಪೂರ್ಣಗೊಳ್ಳುವುದ ರೊಳಗೆ ಹಲವು ಯೋಜನೆಗಳು ಪೂರ್ಣಗೊಳ್ಳಬೇ ಕಾಗಿದೆ. ಹಾಗಿ ರುವಾಗ ನೌಕರರ ಕ್ಷಾಮ ತಲೆ ದೋರಿರುವುದು ತೀವ್ರ ಪ್ರತಿಕೂಲ ವಾಗಿ ಪರಿಣಮಿಸಲಿದೆ ಯೆಂಬ ಮಾತುಗಳು ಕೇಳಿಬರುತ್ತಿದೆ.