ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗೆ 1200 ಹೊಸ ವಾರ್ಡ್‌ಗಳ ಸೃಷ್ಠಿ: ಮುಂದಿನ ವಾರ ಅಧ್ಯಾದೇಶ ಜ್ಯಾರಿ
ಕಾಸರಗೋಡು: ಮುಂದಿನ ವರ್ಷ ಡಿಸೆಂಬರ್ನಲ್ಲಿ ರಾಜ್ಯದ ಸ್ಥಳೀಯಾಡ ಳಿತ ಸಂಸ್ಥೆಗಳಿಗೆ ಚುನಾವಣೆ ನಡೆಯಲಿ ರುವಂತೆಯೇ ರಾಜ್ಯದ ಎಲ್ಲಾ ಸ್ಥಳೀಯಾ ಡಳಿತ ಸಂಸ್ಥೆಗಳಲ್ಲಿ ವಾರ್ಡ್ಗಳ ಸಂಖ್ಯೆಯಲ್ಲಿ ತಲಾ ಒಂದರAತೆ ಹೆಚ್ಚಳ ತರಲು ರಾಜ್ಯ ಸರಕಾರ ತೀರ್ಮಾನಿಸಿದೆ.
ರಾಜ್ಯದಲ್ಲಿ ಒಟ್ಟು 941 ಗ್ರಾಮ ಪಂಚಾಯತ್ಗಳಿದ್ದು, ಅವುಗಳಲ್ಲಿ ಒಟ್ಟಾರೆಯಾಗಿ ಈಗ 15,962 ವಾರ್ಡ್ಗಳಿವೆ. ಇದರ ಹೊರತಾಗಿ ರಾಜ್ಯದ ಒಟ್ಟು 87 ನಗರಸಭೆಗಳಲ್ಲಾಗಿ 3078 ವಾರ್ಡ್ಗಳಿವೆ. ಇನ್ನು ಆರು ಕಾರ್ಪರೇಷನ್ಗಳಲ್ಲಾಗಿ 414 ವಾರ್ಡ್ಗಳು, 152 ಬ್ಲೋಕ್ ಪಂಚಾ ಯತ್ಗಳಲ್ಲಾಗಿ ಒಟ್ಟು 2080 ವಾರ್ಡ್ಗಳು ಹಾಗೂ 14 ಜಿಲ್ಲಾ ಪಂಚಾಯತ್ಗಳಲ್ಲಾಗಿ ಈಗ 331 ವಾರ್ಡ್ (ಡಿವಿಶನ್)ಗಳಿವೆ. ರಾಜ್ಯದಲ್ಲಿ ಒಟ್ಟಾರೆಯಾಗಿ 1200 ಸ್ಥಳೀಯಾಡಳಿತ ಸಂಸ್ಥೆಗಳಿದ್ದು, ಅವುಗಳಲ್ಲಾಗಿ ಈಗ ಒಟ್ಟಾರೆಯಾಗಿ 21,865 ಜನಪ್ರತಿ ನಿಧಿಗಳಿದ್ದಾರೆ. ಇನ್ನು ಪ್ರತೀ ವಾರ್ಡ್ ಗಳಲ್ಲ್ಲಿ ತಲಾ ಒಂದರAತೆ ವಾರ್ಡ್ಗಳನ್ನು ಹೆಚ್ಚಿಸುವ ಮೂಲಕ ಒಟ್ಟಾರೆ ವಾರ್ಡ್ಗಳ ಸಂಖ್ಯೆಯಲ್ಲಿ ಇನ್ನು 1200ರಷ್ಟು ಹೆಚ್ಚಳ ಉಂಟಾಗಲಿದೆ.
ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್ಗಳ ಸಂಖ್ಯೆ ಹೆಚ್ಚಿಸಲು ಆಧ್ಯಾದೇಶ ಹೊರಡಿಸುವ ತೀರ್ಮಾನ ರಾಜ್ಯ ಸರಕಾರ ಕೈಗೊಂಡಿದೆ. ಇದಕ್ಕಾಗಿ ಮುಂದಿನ ಸೋಮವಾರ ಸಚಿವ ಸಂಪುಟದ ವಿಶೇಷ ಸಭೆ ಕರೆಯಲಾಗಿದೆ.
ಹೊಸದಾಗಿ 1200 ವಾರ್ಡ್ ಗಳನ್ನು ಸೃಷ್ಟಿಸುವುದರಿಂದಾಗಿ ಅವುಗಳಿಗೆ ಆಯ್ಕೆಗೊಳ್ಳುವ ಜನಪ್ರತಿನಿಧಿಗಳಿಗೆ ಗೌರವ ಧನ ನೀಡಲು 67 ಕೋಟಿ ರೂ.ಗಳ ಹೆಚ್ಚುವರಿ ಆರ್ಥಿಕ ಹೊರೆ ಸರಕಾರಕ್ಕೆ ಉಂಟಾಗಲಿದೆ.
ಜನಸAಖ್ಯೆಯ ಅನುಪಾತದ ಆಧಾರದಲ್ಲಿ ಎಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳಲ್ಲೂ ತಲಾ ಒಂದರAತೆ ವಾರ್ಡ್ ಹೆಚ್ಚಿಸುವ ರೀತಿಯಲ್ಲಿ ಪಂಚಾಯತ್ ರಾಜ್- ನಗರಸಭಾ ಕಾನೂನಿನಲ್ಲಿ ಅಗತ್ಯದ ತಿದ್ದುಪಡಿ ತರುವ ತೀರ್ಮಾನಕ್ಕೆ ಸರಕಾರ ಬಂದಿದೆ.
ಪAಚಾಯತ್ಗಳಲ್ಲಿ ತಲಾ 5000 ಮಂದಿಗೆ ತಲಾ ಒಂದು ವಾರ್ಡ್ ಬೇಕೆ ನ್ನುವುದು ಅಧಿಕೃತ ಲೆಕ್ಕಾಚಾರವಾಗಿದೆ. ರಾಜ್ಯದಲ್ಲಿ ಜನಸಂಖ್ಯೆಯಲ್ಲಿ ಈಗ ಹೆಚ್ಚಳ ಉಂಟಾಗಿದೆ ಎಂಬುವುದು ಸರಕಾರದ ಲೆಕ್ಕಾಚಾರವಾಗಿದೆ. ರಾಜ್ಯದಲ್ಲಿ ಕಿರು ಗ್ರಾಮ ಪಂಚಾಯತ್ಗಳಲ್ಲಿ ಈಗ ತಲಾ 13ರಂತೆ ಹಾಗೂ ದೊಡ್ಡ ಪಂಚಾಯತ್ಗಳಲ್ಲಿ ಈಗ 23 ವಾರ್ಡ್ಗಳಿವೆ. ಇನ್ನು ಕಾನೂನು ತಿದ್ದುಪಡಿ ತಂದ ಬಳಿಕ ಈ ವಾರ್ಡ್ಗಳ ಸಂಖ್ಯೆ ಮುಂದೆ 14 ಮತ್ತು 24 ಆಗಿ ಹೆಚ್ಚಾಗಲಿದೆ.