ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್ ಪುನರ್ ವಿಭಜನೆ : ಸರಕಾರದ ಅಧ್ಯಾದೇಶ ಹಿಂತಿರುಗಿಸಿದ ರಾಜ್ಯಪಾಲ
ತಿರುವನಂತಪುರ: ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್ ಪುನರ್ ವಿಭಜನೆಗೆ ಸಂಬಂಧಿಸಿ ಸರಕಾರದ ಅಧ್ಯಾದೇಶವನ್ನು ರಾಜ್ಯಪಾಲ ಆರಿಫ್ ಮುಹಮ್ಮ್ ಖಾನ್ ಅಂಗೀಕರಿಸದೆ ಮರಳಿ ಕಳುಹಿಸಿದ್ದಾರೆ. ಚುನಾವಣಾ ನೀತಿ ಸಂಹಿತೆ ಜ್ಯಾರಿಯಲ್ಲಿದೆಯೆಂದು ತಿಳಿಸಿ ರಾಜ್‌ಭವನ್ ಈ ಕ್ರಮ ಕೈಗೊಂಡಿದೆ. ನೀತಿ ಸಂಹಿತೆ ಜ್ಯಾರಿಯಲ್ಲಿರುವು ದರಿಂದ ಈ ವಿಷಯದಲ್ಲಿ ಚುನಾವಣಾ ಆಯೋಗದ ಅನುಮತಿ ಬೇಕೆಂದೂ ರಾಜ್ಯಪಾಲರು ತಿಳಿಸಿದ್ದಾರೆ.
ಅಧ್ಯಾದೇಶಕ್ಕೆ ಅನುಮತಿ ಲಭಿಸದಿರುವುದರಿಂದ ವಿಧಾನಸಭಾ ಅಧಿವೇಶನ ಕರೆಯಲು ಸಾಧ್ಯವಾಗಲಾರದು. ಇದರಿಂದ ಸರಕಾರ ಸಂದಿಗ್ಧತೆಯಲಿಲದೆ. ಪ್ರತಯೇಕ ಸಚಿವಸಂಪುಟ ಸಭೆ ಸೇರಿ ಸ್ಥಳೀಯಾಡಳಿತ ವಾರ್ಡ್ ಪುನರ್ ವಿಭಜಗೆ ಸಂಬಂಧಿಸಿ ನಿರ್ಧಾರ ಕೈಗೊಳ್ಳಲಾಗಿತ್ತು. ಟವಾರ್ಡ್ ಪುನರ್ ವಿಭಜಗೆ ಸಂಬಂಧಿಸಿದ ಸರಕಾರದ ನಿರ್ಧಾರದ ವಿರುದ್ಧ ವಿಪಕ್ಷ ರಂಗಕ್ಕಿಳಿದಿತ್ತು. ಇದು ಸರಕಾರದ ಏಕಪಕ್ಷೀಯ ನಿರ್ಧಾರವಾಗಿದೆ ಯಂದೂ ವಿಪಕ್ಷ ಆರೋಪಿಸಿತ್ತು.
ಎಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳಲ್ಲೂ ತಲಾ ಒಂದೊಂದು ವಾರ್ಡ್ ಹೆಚ್ಚಿಸಲು ಸಚಿವ ಸಂಪುಟ ನಿರ್ಧರಿಸಿತ್ತು. ಎಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳಲ್ಲೂ ತಲಾ ಒಂದೊಂದು ವಾರ್ಡ್ ಹೆಚ್ಚಿಸುವುದರೊಂದಿಗೆ 1200 ವಾರ್ಡ್‌ಗಳ ಹೆಚ್ಚಳವಾಗಲಿದೆ. ಅಷ್ಟು ವಾರ್ಡ್ ಗಳ ಸದಸ್ಯರಿಗೆ ಗೌರವಧನವಾಗಿ ನೀಡಲು ಐದು ವರ್ಷಕ್ಕೆ ಹೆಚ್ಚುವರಿಯಾಗಿ 67 ಕೋಟಿ ರೂಪಾಯಿ ಬೇಕಾಗಿ ಬರಲಿದೆ. 2001ರ ಜನಗಣತಿ ಆಧಾರದಲ್ಲಿ 2010ರಲ್ಲಿ ಕೊನೆಯದಾಗಿ ವಾರ್ಡ್‌ಗಳ ಪುನರ್ ವಿಭಜನೆ ನಡೆಸಲಾಗಿತ್ತು.