ಸ್ಥಳೀಯಾಡಳಿತ ಸಂಸ್ಥೆ: ಕರಡು ಮತದಾರ ಯಾದಿ ಪ್ರಕಟ: ಜಿಲ್ಲೆಯಲ್ಲಿ 1,021,977 ಮತದಾರರು
ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ಶೀಘ್ರ ಚುನಾವಣೆ ನಡೆಯಲಿರುವಂತೆ ಅದಕ್ಕಿರುವ ಪೂರ್ವ ಸಿದ್ಧತೆಯಂತೆ ರಾಜ್ಯ ಚುನಾವಣಾ ಆಯೋಗ ಕರಡು ಮತದಾರ ಯಾದಿ ಪ್ರಕಟಿಸಿದೆ.
ಇದರಂತೆ ಕಾಸರಗೋಡು ಜಿಲ್ಲೆಯ ಕರಡು ಮತದಾರ ಪಟ್ಟಿಯಲ್ಲಿ ಒಟ್ಟು 1,021,977 ಮತದಾರರಿದ್ದಾರೆ. ಇದರಲ್ಲಿ 4,86,113 ಪುರುಷರು, 5,35,857 ಮಹಿಳೆಯರು ಮತ್ತು ಏಳು ಮಂಗಳಮುಖಿಯರು ಒಳಗೊಂಡಿದ್ದಾರೆ. ಇನ್ನು ಅಂತಿಮ ಮತದಾರ ಪಟ್ಟಿಯನ್ನು ಅಗೋಸ್ತ್ 30ರಂದು ಪ್ರಕಟಿಸಲಾಗುವುದು. ಕರಡು ಮತದಾರ ಯಾದಿ ಸ್ಥಳೀಯಾಡಳಿತ ಸಂಸ್ಥೆಗಳು, ಗ್ರಾಮ ಕಚೇರಿ, ತಾಲೂಕು ಕಚೇರಿಗಳಲ್ಲಿ ಹಾಗೂ ರಾಜ್ಯ ಚುನಾವಣಾ ಆಯೋಗದ ವೆಬ್ಸೈಟ್ನಲ್ಲೂ ಪರಿಶೀಲನೆಗಾಗಿ ಲಭಿಸುವುದು.
2025 ಜನವರಿ 1ರಂದು ಅಥವಾ ಅದರ ಮೊದಲು 18 ವರ್ಷ ಪೂರ್ತಿಯಾದ ಎಲ್ಲರೂ ಮತದಾರ ಯಾದಿಯಲ್ಲಿ ಹೆಸರು ನೋಂದಾಯಿಸಬಹುದು. ಮತದಾರ ಯಾದಿಯಲ್ಲಿ ಹೆಸರು ಸೇರ್ಪಡೆಗೊಳಿಸುವವರು ಹಾಗೂ ಮತದಾರರು ಈ ಯಾದಿಯಲ್ಲಿ ತಪ್ಪುಗಳಿದ್ದಲ್ಲಿ ಅದನ್ನು ತಿದ್ದಿ ಸರಿಪಡಿಸಲು ಆ ಕುರಿತಾದ ಅರ್ಜಿಯನ್ನು ರಾಜ್ಯ ಚುನಾವಣಾ ಆಯೋಗದ ವೆಬ್ಸೈಟ್ಗೆ ಆನ್ಲೈನ್ ಮೂಲಕ ಸಲ್ಲಿಸಬೇಕು. ಆ ವೇಳೆ ಹಿಯರಿಂಗ್ ಕಂಪ್ಯೂಟರ್ ಜನರೇಟೆಡ್ ನೋಟೀಸ್ ಲಭಿಸಲಿದೆ. ಆ ನೋಟೀಸಿನಲ್ಲಿ ಹೇಳಲಾಗುವ ದಿನಾಂಕದAದು ಸಂಬAಧಪಟ್ಟ ದಾಖಲು ಪತ್ರಗಳ ಸಹಿತ ಸಂಬAಧಪಟ್ಟ ಕಚೇರಿಯಲ್ಲಿ ಹಾಜರಾಗಬೇಕು. ಇದಕ್ಕಿರುವ ಅರ್ಜಿಯನ್ನು 15 ದಿನಗಳೊಳಗೆ ಸಲ್ಲಿಸಬೇಕು.
ಗ್ರಾಮ ಪಂಚಾಯತ್ ಮತ್ತು ನಗರಸಭೆಗಳಲ್ಲಿ ಅಲ್ಲಿನ ಕಾರ್ಯದರ್ಶಿಗಳು ಮತ್ತು ಕಾರ್ಪೋರೇಶನ್ ಗಳಲ್ಲಿ ಅದರ ಹೆಚ್ಚುವರಿ ಕಾರ್ಯದರ್ಶಿಗಳನ್ನು ಚುನಾವಣಾ ರಿಜಿಸ್ಟ್ರೇಶನ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.