ಸ್ನೇಹಿತರೊಂದಿಗೆ ಸಮುದ್ರಕ್ಕಿಳಿದ ವಲಸೆ ಕಾರ್ಮಿಕ ನಾಪತ್ತೆ
ಕಾಸರಗೋಡು: ಸ್ನೇಹಿತರೊಂದಿಗೆ ಸಮುದ್ರಕ್ಕಿಳಿದ ವಲಸೆ ಕಾರ್ಮಿಕ ಸಮುದ್ರದ ಅಲೆಗೆ ಸಿಲುಕಿ ನಾಪತ್ತೆಯಾದ ಘಟನೆ ಕಾಸರ ಗೋಡು ನೆಲ್ಲಿಕುಂಜೆ ಬೀಚ್‌ನಲ್ಲಿ ನಡೆದಿದೆ. ಉತ್ತರಪ್ರದೇಶ ಬುಲ್ ಬುಳಿಯಾವೂರ್ ಕಾನೋಜ್‌ನ ರಾಣು ಅಲಿಯಾಸ್ ಜೈವೀರ್ ಸಿಂಗ್ (23) ನಾಪತ್ತೆಯಾದ ಯುವಕ. ಈತ ನಿನ್ನೆ ಅಪರಾಹ್ನ ನಾಲ್ವರು ಸ್ನೇಹಿತರೊಂದಿಗೆ ನೆಲ್ಲಿಕುಂಜೆ ಸಮುದ್ರಕ್ಕಿಳಿದಿದ್ದು ಬಲವಾದ ಅಲೆಗೆ ಸಿಲುಕಿ ನಾಪತ್ತೆಯಾಗಿದ್ದಾನೆ. ವಿಷಯ ತಿಳಿದ ಕರಾವಳಿ ಪೊಲೀಸರು, ಅಗ್ನಿಶಾಮಕದಳ, ಬೆಸ್ತರು ಸೇರಿ ವ್ಯಾಪಕ ಶೋಧ ನಡೆಸಿದರೂ ರಾಣುನನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.