ಸ್ಪೆಷಲ್ ಮ್ಯಾರೇಜ್ ಆಕ್ಟ್ ಪ್ರಕಾರವಿರುವ ಹಿಂದೂ- ಮುಸ್ಲಿಂ ವಿವಾಹಕ್ಕೆ ಮುಸ್ಲಿಂ ಕಾನೂನಿನಲ್ಲಿ ಸಿಂಧುತ್ವ ಇಲ್ಲ- ನ್ಯಾಯಾಲಯ
ದೆಹಲಿ: ಸೋಶ್ಯಲ್ ಮ್ಯಾರೇಜ್ ಆಕ್ಟ್ ಪ್ರಕಾರವಿರುವ ಹಿಂದೂ- ಮುಸ್ಲಿಂ ವಿವಾಹ ಮುಸ್ಲಿಂ ವ್ಯಕ್ತಿ ಕಾನೂನು ಪ್ರಕಾರ ಸಿಂಧುವಲ್ಲವೆಂದು ಮಧ್ಯಪ್ರದೇಶ ಉಚ್ಛ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಹೆಣ್ಮಕ್ಕಳ ಮನೆಯ ವರು ವಿವಾಹವನ್ನು ವಿರೋಧಿಸಿದ ಹಿನ್ನೆಲೆಯಲ್ಲಿ ಸ್ಪೆಷಲ್ ಮ್ಯಾರೇಜ್ ಆಕ್ಟ್ ಪ್ರಕಾರ ನೋಂದಾಯಿಸಲು ಪೊಲೀಸ್ ಸಂರಕ್ಷಣೆ ಬೇಕೆಂಬ ಬೇಡಿಕೆಯನ್ನು ತಿರಸ್ಕರಿಸಿದ ನ್ಯಾಯಾಧೀಶ ಗುರುಪಾಲ್ ಸಿಂಗ್ ಅಹ್ಲುವಾಲಿಯಾ ಈ ಆದೇಶ ಹೊರಡಿಸಿದ್ದಾರೆ. ದೂರು ನೀಡಿದ ಯುವತಿ ಅಥವಾ ಯುವಕ ಮತಾಂತರಗೊಳ್ಳಲು ಸಿದ್ಧರಲ್ಲ. ವಿವಾಹ ನಡೆಸದೆ ಒಂದಾಗಿ ಜೀವಿಸಲು ಇವರಿಗೆ ಆಸಕ್ತಿ ಇಲ್ಲ. ಈ ಹಿನ್ನೆಲೆಯಲ್ಲಿ ಇವರ ದೂರಿನಲ್ಲಿ ಮಧ್ಯಪ್ರವೇಶಿಸಲಾಗುವುದಿಲ್ಲವೆಂದು ನ್ಯಾಯಾಲಯ ತಿಳಿಸಿದೆ.
ಮುಸ್ಲಿಂ ಪುರುಷ ಮುಸ್ಲಿಂ ಮಹಿಳೆಯನ್ನು ಮಾತ್ರವಲ್ಲ, ಕ್ರಿಶ್ಚಿಯನ್, ಜೂತ ಧರ್ಮೀಯರನ್ನು ವಿವಾಹ ವಾಗಬಹುದೆಂದು ಮುಸ್ಲಿಂ ಕಾನೂನಿನಲ್ಲಿ ತಿಳಿಸಲಾಗಿದೆ. ಆದರೆ ವಿಗ್ರಹ ಆರಾಧನೆಯನ್ನು, ಅಗ್ನಿಯನ್ನು ಆರಾಧಿಸುವವರ ವಿವಾಹ ಮಾಡಿ ಕೊಂಡರೆ ಅದು ಸಿಂಧುವಾಗದು. ಮುಸ್ಲಿಂ ಮಹಿಳೆಯರಿಗೆ ಮುಸ್ಲಿಂ ಕಾನೂನು ಪ್ರಕಾರ ಮುಸ್ಲಿಂರನ್ನು ಮಾತ್ರವೇ ವಿವಾಹವಾಗಲು ಅರ್ಹತೆ ಇದೆ.
ಈ ಕೇಸಿನಲ್ಲಿ ಯುವತಿ ಮತಾಂತರಗೊಳ್ಳಲು ಸಿದ್ಧಳಿಲ್ಲ. ಆದುದರಿಂದ ಹಿಂದೂ ಯುವತಿಯೊಂದಿಗಿನ ವಿವಾಹ ಮುಸ್ಲಿಂ ಕಾನೂನು ಪ್ರಕಾರ ಸಿಂಧುವಾಗದು. ಮುಸ್ಲಿಂ ಕಾನೂನು ಪ್ರಕಾರ ಸಿಂಧುವಾಗದ ವಿವಾಹ ಸ್ಪೆಷಲ್ ಮ್ಯಾರೇಜ್ ಆಕ್ಟ್ ಪ್ರಕಾರವೂ ಸಿಂಧುವಾಗುವುದಿಲ್ಲವೆಂದು ನ್ಯಾಯಾಲಯ ತಿಳಿಸಿದೆ.