ಸ್ವಾತಂತ್ರ್ಯ ದಿನಾಚರಣೆ: ಪ್ರಧಾನಿ ನರೇಂದ್ರಮೋದಿಯಿಂದ ಹೊಸದಾಖಲೆ
ನವದೆಹಲಿ: ಅಗೋಸ್ತ್ 15ರಂದು ಇಡೀ ದೇಶವೇ ಸ್ವಾತಂತ್ರ‍್ಯ ದಿನಾಚರಣೆಯನ್ನು ದೊಡ್ಡ ಹಬ್ಬವಾಗಿ ಆಚರಿಸಲಾಗು ತ್ತಿದೆ. ಸ್ವಾತಂತ್ರ‍್ಯೋತ್ಸವದAದು ದೆಹಲಿಯ ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜ ಹಾರಿಸಿ ದೇಶವನ್ನು ದ್ದೇಶಿಸಿ ಮಾತನಾಡುವುದು ಸ್ವತಂತ್ರ ಭಾರತದ ಒಂದು ಪರಂಪರೆ ಯಾಗಿದೆ. ಆದರೆ ಈ ವರ್ಷದ ಸ್ವಾತಂತ್ರ‍್ಯೋತ್ಸವಕ್ಕೆ ಒಂದು ವಿಶೇಷತೆಯಿದೆ. ಅದೇನೆಂದರೆ ಸತತವಾಗಿ 11 ಬಾರಿ ಸ್ವಾತಂತ್ರ‍್ಯೋ ತ್ಸವ ಭಾಷಣ ಮಾಡಿದ ಪ್ರಧಾನಿಗಳ ಪಟ್ಟಿಯಲ್ಲಿ ಈಗ ಇರುವ ಮಾಜಿ ಪ್ರಧಾನಿ ದಿ| ಇಂದಿರಾ ಗಾಂಧಿಯ ವರನ್ನು ಹಾಲಿ ಪ್ರಧಾನಿ ನರೇಂದ್ರಮೋದಿ ಸರಿಗಟ್ಟಲಿದ್ದಾರೆ. ಇದರ ಜೊತೆಗೆ ಮಾಜಿ ಪ್ರಧಾನಿ ಮನ್ಮೋಹನ್ ಸಿಂಗ್ರ ದಾಖಲೆಯನ್ನೂ ಪ್ರಧಾನಿ ಮೋದಿ ಮುರಿಯಲಿದ್ದಾರೆ.
ಮೋದಿ ಮೂರನೇ ಅವ ಧಿಗೂ ಪ್ರಧಾನಿಯಾಗಿ ಮುಂದು ವರಿದಿದ್ದಾರೆ. ಕಳೆದ 10 ವರ್ಷ ಗಳಿಂದ ಅವರು ಕೆಂಪುಕೋಟೆ ಯಲ್ಲಿ ತ್ರಿವರ್ಣ ಧ್ವಜ ಹಾರಿಸಿ ದೇಶವನ್ನುದ್ದೇಶಿಸಿ ಮಾತನಾಡಿ ದ್ದಾರೆ.ಈ ಹಿಂದೆ ಮಾಜಿ ಪ್ರಧಾನಿ ಡಾ. ಮನ್ ಮೋಹನ್ ಸಿಂಗ್ ಸತತವಾಗಿ 10 ಬಾರಿ ಸ್ವಾತಂತ್ರ‍್ಯ ದಿನಾಚರಣೆಯ ಭಾಷಣ ಮಾಡಿದ್ದರು. ಅದಕ್ಕೂ ಮೊದಲು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು 1966ರಿಂದ 19771977ರ ವರೆಗೆ ನಿರಂತರವಾಗಿ ಸ್ವಾತಂತ್ರ‍್ಯೋತ್ಸವ ಭಾಷಣ ಮಾಡಿದ್ದರು. ಅದಾದ ಬಳಿಕ 1980 ಹಾಗ 1984ರಲ್ಲೂ ಇಂದಿರಾ ಗಾಂಧಿ ಸ್ವಾತಂತ್ರ‍್ಯೋತ್ಸವ ಭಾಷಣ ಮಾಡಿದ್ದರು. ಆದರೆ ಸತತವಾಗಿ 11 ವರ್ಷ ಸ್ವಾತಂತ್ರ‍್ಯ ದಿನಾಚರಣೆಯ ಭಾಷಣ ಮಾಡಿದ ದಾಖಲೆ ಈಗ ಇಂದಿರಾಗಾAಧಿಯವರ ಹೆಸರಲ್ಲಿದೆ. ಆ ದಾಖಲೆಯನ್ನು ಪ್ರಧಾನಮಂತ್ರಿ ಮೋದಿ ನಾಳೆ ಸರಿಗಟ್ಟಲಿದ್ದಾರೆ.