ಹಂದಿ ಸಾಕಣೆ ಕೇಂದ್ರದ ತ್ಯಾಜ್ಯ ಹೊಂಡಕ್ಕೆ ಬಿದ್ದು ಕಾರ್ಮಿಕ ಮೃತ್ಯು
ಕಾಸರಗೋಡು: ಹಂದಿ ಸಾಕಣೆ ಕೇಂದ್ರದ ತ್ಯಾಜ್ಯ ಹೊಂಡಕ್ಕೆ ಬಿದ್ದು ಕಾರ್ಮಿಕ ಮೃತಪಟ್ಟ ಘಟನೆ ನಡೆದಿದೆ. ಕೂಡ್ಲು ಪಾಯಿಚ್ಚಾಲ್ ಪೂಕರೆಯಲ್ಲಿ ಖಾಸಗಿ ವ್ಯಕ್ತಿಯ ಮಾಲಕತ್ವದಲ್ಲಿರುವ ಹಂದಿ ಸಾಕಣೆ ಕೇಂದ್ರದಲ್ಲಿ ನಿನ್ನೆ ಸಂಜೆ ಈ ಘಟನೆ ನಡೆದಿರುತ್ತದೆ. ನೇಪಾಲ ನಿವಾಸಿ ಮಯೇಶ್ರಾಯ್ (19) ಮೃತಪಟ್ಟ ದುರ್ದೈವಿ. ತ್ಯಾಜ್ಯ ಹೊಂಡಕ್ಕೆ ಕಾರ್ಮಿಕ ಬಿದ್ದ ವಿಷಯ ತಿಳಿದು ಪೊಲೀಸ್ ಹಾಗೂ ಅಗ್ನಿಶಾಮಕದಳ ತಲುಪಿ ಆತನನ್ನು ಮೇಲಕ್ಕೆತ್ತಲು ಪ್ರಯತ್ನಿಸಿದ್ದಾರೆ. ಅದು ಅಸಾಧ್ಯವಾ ದಾಗ ಜೇಸಿಬಿ ಬಳಸಿ ಮೇಲಕ್ಕೆತ್ತಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸ ಲಾಗಲಿಲ್ಲ. ಮೃತದೇಹವನ್ನು ಜನರಲ್ ಆಸ್ಪತ್ರೆಗೆ ತಲುಪಿಸಿದ್ದು, ಮರಣೋತ್ತರ ಪರೀಕ್ಷೆ ಇಂದು ನಡೆಯಲಿದೆ. ನಿನ್ನೆ ಬೆಳಿಗ್ಗೆಯಷ್ಟೇ ಮಯೇಶ್ ರಾಯ್ ಇಲ್ಲಿಗೆ ಕೆಲಸಕ್ಕೆ ಸೇರಿದ್ದನು. ನಗರ ಠಾಣೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.