ಹಡಗು ಕಂಪೆನಿಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಏಳು ಲಕ್ಷ ರೂ. ಪಡೆದು ವಂಚಿಸಿದ ಪ್ರಕರಣ: ಪೆರ್ಲ ನಿವಾಸಿ ಸೆರೆ
ಪೆರ್ಲ: ತುರ್ಕಿಯನ್ನು ಪ್ರಧಾನ ಕೇಂದ್ರವನ್ನಾಗಿ ಕಾರ್ಯವೆಸಗುತ್ತಿರುವ ಹಡಗು ಕಂಪೆನಿಯಲ್ಲಿ ಡೋಕ್ ಕೇಡೆಟ್ ಉದ್ಯೋಗ ಕೊಡಿಸುವುದಾಗಿಯೂ ನಂಬಿಸಿ ಕೊಲ್ಲಂ ಪಾರುಂಬ ನಿವಾಸಿಯಿಂದ ಏಳು ಲಕ್ಷ ರೂ. ಪಡೆದು ವಂಚನೆ ಗೈದ ಪ್ರಕರಣದ ಆರೋಪಿಯನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೊಲ್ಲಂ ನೂರುನಾಡ್ ಪೊಲೀಸರು ಬಂಧಿಸಿದ್ದಾರೆ.
ಪೆರ್ಲ ಎಣ್ಮಕಜೆ ಜಿಲಾನಿ ಮಂಜಿಲ್ನ ಅಹಮ್ಮದ್ ಅಸ್ಬಾಕ್ (28) ಬಂಧಿತ ಆರೋಪಿ. ಮುಂಬೈಯಲ್ಲಿ ಮರ್ಚೆಂಟ್ ನೇವಿ ಕೋರ್ಸ್ ಪದವಿ ಪಡೆದ ಕೊಲ್ಲಂ ಪಾರುಂಬಾ ನಿವಾಸಿಯಾದ ಯುವಕನೋರ್ವ ನೀಡಿದ ದೂರಿನಂತೆ ಆರೋಪಿ ಅಹಮ್ಮದ್ ಅಸ್ಬಾಕ್ ವಿರುದ್ಧ ನುರನಾಡ್ ಪೊಲೀಸರು ವಂಚನೆ ಪ್ರಕರಣ ದಾಖಲಿ ಸಿಕೊಂಡಿದ್ದಾರೆ.
ಬೆಂಗಳೂರನ್ನು ಕೇಂದ್ರವನ್ನಾಗಿ ಕಾರ್ಯವೆಸಗುತ್ತಿರುವ ರಿಕ್ರೂಟ್ಮೆಂಟ್ ಸಂಸ್ಥೆಯಿಂದ ತುರ್ಕಿಯ ಹಡಗು ಕಂಪೆನಿಯಲ್ಲಿ ಉದ್ಯೋಗಾವಕಾಶಗಳಿವೆ ಎಂಬ ಆಫರ್ ದೂರುಗಾರನಾದ ಕೊಲ್ಲಂನ ಯುವಕನಿಗೆ ೨೦೨೩ ಜುಲೈಯಲ್ಲಿ ಲಭಿಸಿತ್ತು, ಅದರಂತೆ ನಾನು ಆರೋಪಿಯ ಕಚೇರಿಯನ್ನು ಸಂಪರ್ಕಿಸಿದ್ದೆ. ಬಳಿಕ ಇಂಟರ್ವ್ಯೂ ನಡೆಸಿ ಸರ್ಟಿಫಿಕೇಟ್ಗಳನ್ನು ಪರಿಶೀಲಿಸಿದ ಬಳಿಕ ನೇಮಕಾತಿ ಹೆಸರಲ್ಲಿ ಎಸ್ಬಿಐ ಖಾತೆ ಮೂಲಕ ಆರೋಪಿ ತನ್ನಿಂದ ಏಳು ಲಕ್ಷ ರೂ. ಪಡೆದನೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಯುವಕ ಆರೋಪಿಸಿದ್ದಾನೆ. ಅದಾದ ನಂತರ ನಾನು ಆರೋಪಿಯನ್ನು ಫೋನ್ ಮೂಲಕ ಸಂಪರ್ಕಿಸಿದಾಗ ಅದಕ್ಕೆ ಯಾವುದೇ ರೀತಿಯ ಪ್ರಕ್ರಿಯೆ ಲಭಿಸದಾಗ ತಾನು ವಂಚನೆಗೊ ಳಗಾಗಿರುವ ವಿಷಯ ತನ್ನ ಗಮನಕ್ಕೆ ಬಂತೆಂದೂ ದೂರಿನಲ್ಲಿ ಯುವಕ ತಿಳಿಸಿದ್ದಾನೆ. ಅದರಂತೆ ನುರುನಾಡ್ ಪೊಲೀಸರು ಪ್ರಕರಣ ದಾಖಲಿ ಸಿಕೊಂಡು ತನಿಖೆ ಆರಂಭಿಸಿದಾಗ ಆರೋಪಿ ದುಬಾಯಿಗೆ ಪಲಾ ಯನಗೈದಿರುವ ವಿಷಯ ಪೊಲೀಸರಿಗೆ ಲಭಿಸಿದೆ. ಅದರಂತೆ ಆರೋಪಿಯ ಪತ್ತೆಗಾಗಿ ಪೊಲೀಸರು ಲುಕೌಟ್ ನೋಟೀಸ್ ಜ್ಯಾರಿಗೊಳಿಸಿದ್ದರು. ಅದಾದ ಬಳಿಕ ಊರಿಗೆ ಹಿಂತಿರುಗಲೆಂದು ಆರೋಪಿ ದುಬಾಯಿಯಿಂದ ವಿಮಾನದಲ್ಲಿ ಮಂಗಳೂರು ನಿಲ್ದಾಣಕ್ಕೆ ಬಂದಾಗ ಅಲ್ಲಿಂದ ಆತನನ್ನು ಪೊಲೀಸರು ಬಂಧಿಸಿ, ನುರನಾಡ್ ಪೊಲೀಸ್ ಠಾಣೆಗೆ ಸಾಗಿಸಿದ್ದಾರೆ.
ಬಂಧಿತ ಆರೋಪಿ ವಿರುದ್ಧ ಕೇರಳದ ಇತರ ಹಲವು ಪೊಲೀಸ್ ಠಾಣೆಗಳಲ್ಲ್ಲೂ ಇಂತಹ ವಂಚನೆ ಪ್ರಕರಣಗಳು ದಾಖಲುಗೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.