ಹಣ್ಣು ಹಂಪಲಿನ ಮರೆಯಲ್ಲಿ ಎಂ.ಡಿ.ಎಂ.ಎ ಮಾರಾಟ: ಓರ್ವ ಸೆರೆ
ಕಾಸರಗೋಡು: ಹಣ್ಣು ಹಂಪಲಿನ ಮರೆಯಲ್ಲಿ ಮಾರಕ ಮಾದಕವಸ್ತುವಾದ ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪದಂತೆ ಕಾಸರಗೋಡು ಪೊಲೀ ಸರು ಮತ್ತು ಡಾನ್ ಸಾಫ್ ನೇತೃತ್ವದ ತಂಡ ನಡೆಸಿದ ಜಂಟಿ ಕಾರ್ಯಾ ಚರಣೆಯಲ್ಲಿ ಓರ್ವನನ್ನು ಬಂಧಿಸಿದೆ.
ಉಪ್ಪಳ ರೈಲು ನಿಲ್ದಾಣ ರಸ್ತೆ ಬಳಿಯ ಬಿಸ್ಮಿಲ್ಲಾ ಮಂಜಿಲ್ ನಿವಾಸಿ ಹಾಗೂ ಕಾಸರಗೋಡು ಹಳೇ ಬಸ್ ನಿಲ್ದಾಣ ಪರಿಸರದಲ್ಲಿ ರಸ್ತೆ ಬದಿ ಹಣ್ಣು ಹಂಪಲು ಮಾರಾಟ ಮಾಡುತ್ತಿರುವ ಮೊಹಮ್ಮದ್ ಶಮೀರ್ ಬಿ.ಎ. (28) ಬಂಧಿತ ಆರೋಪಿ. ಈತನ ಕೈವಶ ದಿಂದ 25.9 ಗ್ರಾಂ ಎಂಡಿಎಂಎ ಹಾಗೂ ೨೫೦೦೦ ರೂ. ನಗದನ್ನು ಪತ್ತೆಹಚ್ಚಲಾಗಿದೆ. ಈತ ಉಪ್ಪಳದಿಂದ ಬಸ್ಸಿನಲ್ಲಿ ಕಾಸರಗೋಡಿಗೆ ಬಂದು ನಗ ರದ ಕರಂದಕ್ಕಾಡ್ನಲ್ಲಿ ಇಳಿಯುತ್ತಿದ್ದ ವೇಳೆ ಆತನ ದೇಹ ತಪಾಸಣೆಗೊಳ ಪಡಿಸಿದಾಗ ಆತನ ಕೈವಶವಿದ್ದ ಎಂಡಿಎಂಎ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಡಿ. ಶಿಲ್ಪ ಅವರು ನೀಡಿದ ನಿರ್ದೇಶ ಪ್ರಕಾರ ಡಿವೈಎಸ್ಪಿಗಳಾದ ಸಿ.ಕೆ. ಸುನಿಲ್ ಕುಮಾರ್, ಟಿ. ಉತ್ತಮ್ ದಾಸ್ರ ನೇತೃತ್ವದಲ್ಲಿ ಕಾಸರಗೋಡು ಪೊಲೀಸ್ ಠಾಣೆಯ ಎಸ್ಐ ಎಂ.ವಿ ಪ್ರತಿಶ್ ಕುಮಾರ್, ಎಸ್.ಸಿ.ಪಿ.ಒಗಳಾದ ಚಂದ್ರಶೇಖರನ್, ಲಿನೀಶ್, ಸಿಪಿಒ ಸನೀಶ್, ಡಾನ್ಸಾಫ್ ತಂಡದ ಎಸ್ಐ ಕೆ. ನಾರಾಯಣನ್, ಎಸ್ಸಿಪಿಒ ರಾಜೇಶ್, ಸಿಪಿಒ ಶಜೀಶ್ ಎಂಬವರ ನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ. ಬಂಧಿತನನ್ನು ನಂತರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.