ಹತ್ತನೇ ತರಗತಿ ವಿದ್ಯಾರ್ಥಿಯನ್ನು ದೂಡಿ ಹಾಕಿದ ಘಟನೆ: ಆರು ಮಂದಿ ಸಹಪಾಠಿಗಳ ವಿರುದ್ಧ ಕೇಸು

ಕಾಸರಗೋಡು: ಶಾಲೆ ಬಿಟ್ಟು ಮನೆಗೆ ನಡೆದು ಹೋಗುತ್ತಿದ್ದ ಹತ್ತನೇ  ತರಗತಿ ವಿದ್ಯಾರ್ಥಿಯನ್ನು ದೂಡಿ ಹಾಕಿ ಗಂಭೀರ ಗಾಯಗೊಳಿಸಿದ ಘಟನೆಗೆ ಸಂಬಂಧಿಸಿ ಸಹಪಾಠಿಗಳಾದ ಆರು ಮಂದಿ ವಿರುದ್ಧ ಬೇಕಲ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಬೇಕಲ ಪೊಲೀಸ್ ಠಾಣೆ ವ್ಯಾಪ್ತಿ ಯ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯೊಂದರ ವಿದ್ಯಾರ್ಥಿಯನ್ನು ದೂಡಿ ಹಾಕಿ ಗಾಯಗೊಳಿಸಲಾಗಿದೆ. ಬಾಲಕ ತರಗತಿ ಮುಗಿದು ಮನೆಗೆ ನಡೆದು ಹೋಗುತ್ತಿದ್ದನು. ಈ ವೇಳೆ ಆತನನ್ನು ಹಿಂಬಾಲಿಸಿ ಬಂದ ವಿದ್ಯಾ ರ್ಥಿ ದೂಡಿ ಹಾಕಿರುವುದಾಗಿ ದೂರಲಾ ಗಿದೆ. ಆದರೆ ಈ ವಿಷಯ ಮೊದಲು ಯಾರಿಗೂ ತಿಳಿದಿಲ್ಲ. ಸಮೀಪದ ಮನೆಯ ಸಿಸಿಟಿವಿ ಕ್ಯಾಮರಾದ ದೃಶ್ಯಗಳನ್ನು ಪರಿಶೀಲಿಸಿದಾಗ ಬಾಲಕನ ಮೇಲೆ  ನಡೆದ ದಾಳಿಯ ದೃಶ್ಯ ಕಂಡು ಬಂದಿದೆ.  ಇದೇ ವೇಳೆ ಚಿಕಿತ್ಸೆ ಮುಗಿದು ಮನೆಗೆ ಮರಳಿ ತಲುಪಿದ ವಿದ್ಯಾರ್ಥಿಯ ಎರಡೂ ಕೈಗಳಿಗೆ ಶಕ್ತಿ ಮರಳಿ ಲಭಿಸಿಲ್ಲ. ಆಹಾರ ಸ್ವತಃ ಸೇವಿಸಲು ಸಾಧ್ಯವಾಗು ತ್ತಿಲ್ಲ. ಇದೇ ಸ್ಥಿತಿ ಮುಂದುವರಿದರೆ  ವಿದ್ಯಾ ರ್ಥಿಗೆ ಪರೀಕ್ಷೆ ಬರೆಯಲು ಸಾಧ್ಯವಿದೆಯೇ ಎಂಬ ಆತಂಕ ಹುಟ್ಟಿಕೊಂಡಿದೆ.

You cannot copy contents of this page