ಹನಿಟ್ರಾಪ್‌ನಲ್ಲಿ ಸಿಲುಕಿಸಿ ಹಣ ಎಗರಿಸಿದ ಪ್ರಕರಣ: ಇನ್ನೋರ್ವ ಸೆರೆ
ಕಾಸರಗೋಡು: ನಗ್ನ ಫೊಟೋ ತೆಗೆದು ೫೦ರ ಹರೆಯದ ವ್ಯಕ್ತಿಯನ್ನು ಹನಿಟ್ರಾಪ್‌ನಲ್ಲಿ ಸಿಲುಕಿಸಿ ಬ್ಲಾಕ್ ಮೇಲ್ ಗೈದು ಐದು ಲಕ್ಷ ರೂ. ಎಗರಿಸಿದ ಪ್ರಕರಣದ ಇನ್ನೋರ್ವ ಆರೋಪಿಯನ್ನು ಮೇಲ್ಪರಂಬ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎ. ಸಂತೋಷ್‌ರ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.
ಚೆಮ್ನಾಡ್ ಮುಂಡಾಕುಳದ ಸಯ್ಯಿದ್ ರಫೀಕ್ (33) ಬಂಧಿತ ಆರೋಪಿ. ಈ ಪ್ರಕರಣಕ್ಕೆ ಸಂಬಂಧಿಸಿ ಇತರ ಏಳು ಮಂದಿ ಆರೋಪಿಗಳನ್ನು ಪೊಲೀಸರು ಕಳೆದ ಜನವರಿ ತಿಂಗಳಲ್ಲೇ ಬಂಧಿಸಿದ್ದರು.
ಉದುಮ ಬಾರಾ ಮಾಂಙಾಡ್ ನಿವಾಸಿಯೋರ್ವರು ನೀಡಿದ ದೂರು ಪ್ರಕಾರ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದರು. ದೂರಿನ ಪ್ರಕಾರ ಪ್ರಕರಣಕ್ಕೆ ಸಂಬಂಧಿಸಿ ಕುಟ್ಟಿಕಾಟ್ಟೂರಿನ ಎಂ.ಪಿ. ರುಬಿನ್ (29) ಎಂಬಾತನನ್ನು ಪೊಲೀಸರು ಈ ಹಿಂದೆ ಬಂಧಿಸಿದ್ದರು. ನಾನು ಬಡ ಕುಟುಂಬಕ್ಕೆ ಸೇರಿದ ವಿದ್ಯಾರ್ಥಿಯಾಗಿ ರುವುದಾಗಿಯೂ ತನ್ನ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡುವಂತೆ ಆತ ದೂರುಗಾರನನ್ನು ಸಂಪರ್ಕಿಸಿದ್ದನೆನ್ನಲಾ ಗಿದೆ. ಅದರಂತೆ ರುಬಿನ್ ದೂರುಗಾ ರನನ್ನು ಲ್ಯಾಪ್‌ಟೋಪ್ ಖರೀದಿಸಿ ನೀಡುವಂತೆ ಮಂಗಳೂರಿನ ಹೊಟೇ ಲೊಂದಕ್ಕೆ ಕರೆದೊಯ್ದನೆಂದೂ, ಅಲ್ಲಿ ಅವರ ನಗ್ನ ಚಿತ್ರ ತೆಗೆದು ಈ ಪ್ರಕರಣದ ಇತರ ಆರೋಪಿಗಳ ಜತೆ ನಂತರ ನೀಲೇಶ್ವರದ ಪಡನ್ನಕ್ಕಾಡಿನ ಮನೆಯೊಂದಕ್ಕೆ ಕರೆದೊಯ್ದು ನಗ್ನ ಚಿತ್ರವನ್ನು ಇತರರಿಗೆ ಪ್ರಚಾರ ಮಾಡುವುದಾಗಿ ಬೆದರಿಸಿ ಆರೋಪಿಗಳು ನನ್ನಿಂದ ಐದು ಲಕ್ಷ ರೂ. ಎಗರಿಸಿದರೆಂದು ದೂರುಗಾರ ದೂರಿನಲ್ಲಿ ಆರೋಪಿಸಿದ್ದಾರೆ. ಬಂಧಿತ ಆರೋಪಿ ರಫೀಕ್ ಕಾರು ಚಾಲಕನಾಗಿರುವುದಾಗಿಯೂ, ಆತನ ಮೊಬೈಲ್ ಫೋನ್‌ನ ಲೊಕೇಶನ್ ಗುರುತಿಸಿ, ಕಾಸರಗೋಡಿನಿಂದ ಆತನನ್ನು ಬಂಧಿಸಲಾಯಿತೆಂದು ಪೊಲೀಸರು ತಿಳಿಸಿದ್ದಾರೆ.